ಮಾಸ್ಕೋ: ಕ್ರೈಮಿಯಾವನ್ನು ರಷ್ಯಾಕ್ಕೆ ಸಂಪರ್ಕಿಸುವ ಸೇತುವೆಯ ಮೇಲೆ ಟ್ರಕ್ ಅನ್ನು ಸ್ಫೋಟಿಸಲಾಗಿದೆ. ಸ್ಫೋಟ ಪರಿಣಾಮ ಸೇತುವೆಗೆ ಭಾರೀ ಹಾನಿಯಾಗಿದೆ. ಈ ಸ್ಫೋಟದ ಕುರಿತಂತೆ ರಷ್ಯಾ ತನಿಖೆ ಪ್ರಾರಂಭಿಸಿದೆ.
ತಡವಾಗಿ ಬಂದಿದ್ದಕ್ಕೆ ಝೊಮ್ಯಾಟೋ ಏಜೆಂಟ್ ಗೆ ಗ್ರಾಹಕ ಮಾಡಿದ್ದೇನು ಗೊತ್ತಾ..?
ರಷ್ಯಾದ ತನಿಖಾ ಸಮಿತಿಯು ಕ್ರಿಮಿಯನ್ ಸೇತುವೆಯ ಮೇಲಿನ ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ ಎಂದು ಹೇಳಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಇಂದು ಬೆಳಿಗ್ಗೆ ತಮನ್ ಪರ್ಯಾಯ ದ್ವೀಪದ ಬದಿಯಿಂದ ಕ್ರಿಮಿಯನ್ ಸೇತುವೆಯ ಆಟೋಮೊಬೈಲ್ ಭಾಗದಲ್ಲಿ, ಟ್ರಕ್ ಅನ್ನು ಸ್ಫೋಟಿಸಲಾಗಿದೆ. ಇದು ಕ್ರೈಮಿಯಾ ಪರ್ಯಾಯ ದ್ವೀಪದ ಕಡೆಗೆ ಹೋಗುತ್ತಿದ್ದ ರೈಲಿನಲ್ಲಿದ್ದ ಏಳು ಇಂಧನ ಟ್ಯಾಂಕ್ಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಸಮಿತಿ ಹೇಳಿದೆ.
Crimean bridge this morning. pic.twitter.com/chmoUEIxt7
— Anton Gerashchenko (@Gerashchenko_en) October 8, 2022
ಈ ಸೇತುವೆಯನ್ನು 2018 ರಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉದ್ಘಾಟಿಸಿದ್ದರು. ಸ್ಫೋಟದಿಂದಾಗಿ ಸೇತುವೆಯ ೊಂದು ಭಾಗ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ರಷ್ಯಾದ ತನಿಖಾ ಸಮಿತಿಯ ತನಿಖಾಧಿಕಾರಿಗಳು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಅಪರಾಧದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಪತ್ತೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಪುಟಿನ್ 2014 ರಲ್ಲಿ ಉಕ್ರೇನ್ನಿಂದ ಕ್ರೈಮಿಯಾವನ್ನು ಸ್ವಾಧೀನಪಡಿಸಿಕೊಂಡಿದ್ದರು.
ಚಿಕ್ಕಮಗಳೂರು ದತ್ತಪೀಠದ ಹೋಮ ಮಂಟಪದಲ್ಲೇ ಮಾಂಸಹಾರ ಸೇವನೆ : ಹಿಂದೂಪರ ಸಂಘಟನೆಗಳಿಂದ ಆಕ್ರೋಶ |Datta peeta