ಪಾಟ್ನಾ: ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಅಂತಹದ್ದೆ ವಿಡಿಯೋವೊಂದು ಸೋಶಿಯಲ್ ವಿಡಿಯಾದಲ್ಲಿ ಸದ್ದು ಮಾಡ್ತಾ ಇದೆ.
BIG BREAKING NEWS: ವಿಧಾನ ಪರಿಷತ್ನಲ್ಲಿ ಧ್ವನಿ ಮತದ ಮೂಲಕ ಮತಾಂತರ ನಿಷೇಧ ವಿಧೇಯಕ ಅಂಗೀಕಾರ
ಖದೀಮನೊಬ್ಬ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಬಳಿಯಿದ್ದ ಮೊಬೈಲ್ ಕಳವು ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ. ಈತ ರೈಲಿನ ಕಿಟಕಿಯ ಮೂಲಕ ಪ್ರಯಾಣಿಕನ ಮೊಬೈಲ್ ಕಳವು ಮಾಡಲು ಯತ್ನಿಸಿದ್ದಾನೆ. ಆಗ ಪ್ರಯಾಣಿಕರು ಆತನ ಕೈಯನ್ನು ಹಿಡಿದಿದ್ದು, ಕಳ್ಳ ಚಲಿಸುತ್ತಿದ್ದ ರೈಲಿನ ಹೊರಗೆ ತೂಗಾಡುತ್ತಾ, ಜೋತಾಡುತ್ತಾ, ಕ್ಷಮೆಯಾಚಿಸುವುದುನ್ನು ವಿಡಿಯೋದಲ್ಲಿ ನೋಡಬಹುದು.
WATCH | Bihar Thief's Train Hangout: He Dangles Outside As Passengers Hold Arms pic.twitter.com/dvWqEbRATB
— NDTV (@ndtv) September 15, 2022
ಘಟನೆ ನಿನ್ನೆ ಬಿಹಾರದಲ್ಲಿ ನಡೆದಿದ್ದು, ಮೊಬೈಲ್ ಕಳವು ಮಾಡಲು ಬಂದವನನ್ನು ಪ್ರಯಾಣಿಕರೋರ್ವರು ಚಲಿಸುತ್ತಿದ್ದ ರೈಲಿನಲ್ಲಿ ಕಳ್ಳನ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ಮುಂದಿನ ರೈಲ್ವೆ ನಿಲ್ದಾಣ ಬರುವವರೆಗೆ ಹಾಗೆಯೇ ಹಿಡಿದಿದ್ದರು. ಬಳಿಕ ರೈಲ್ವೆ ನಿಲ್ದಾಣದಲ್ಲಿ ಕಳ್ಳನನ್ನು ಪೊಲೀಸರಿಗೊಪ್ಪಿಸಿದ್ದಾರೆ ಎನ್ನಲಾಗುತ್ತಿದೆ.
ಸುಮಾರು 10 ಕಿಲೋಮೀಟರ್ವರೆಗೂ ಖದೀಮನನ್ನು ಪ್ರಯಾಣಿಕರು ಬಿಟ್ಟಿರಲಿಲ್ಲ ಎನ್ನಲಾಗುತ್ತಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
BREAKING NEWS : ಟೆನ್ನಿಸ್ ದಿಗ್ಗಜ ‘ರೋಜರ್ ಫೆಡರರ್’ ನಿವೃತ್ತಿ ಘೋಷಣೆ |Roger Federer