ಬೆಂಗಳೂರು: ಕೆಲ ದಿನಗಳ ಹಿಂದೆ ಸುರಿದಂತ ಮಳೆಯಿಂದಾಗಿ ( Bengaluru Rain ) ಬೆಂಗಳೂರು ಕೆರೆಯಂತಾಗಿತ್ತು. ಅದರಲ್ಲೂ ಅಂಡರ್ ಪಾಸ್ ನಲ್ಲಿ ಭಾರೀ ನೀರಿನಲ್ಲಿ ( Heavy Rain ) ವಾಹನಗಳೇ ಮುಳುಗಡೆಯಾಗುವಂತೆ ಆಗಿದ್ದವು. ಈ ಹಿನ್ನಲೆಯಲ್ಲಿಯೇ ಮಳೆ ಬಂದಾಗ ಅಂಡರ್ ಪಾಸ್ ನಲ್ಲಿ ವಾಹನ ನಿಲ್ಲಿಸುವಂತಿಲ್ಲ. ನಿಲ್ಲಿಸಿದ್ರೇ ದಂಡ ಹಾಕೋದಾಗಿ ಬೆಂಗಳೂರು ಸಂಚಾರ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ( Ravikantegowdha ) ಖಡಕ್ ಎಚ್ಚರಿಕೆ ನೀಡಿದ್ದಾರೆ.

BIGG NEWS : “ನಾನು ಸತ್ತಿದ್ದೇನೆ ಎಂಬ ಸುದ್ದಿ ಮಾಡಿದ್ರು” ; ‘ವಿಚಿತ್ರ ವದಂತಿ’ ನೆನೆದು ನಕ್ಕ ‘ಜಡೇಜಾ’

ಈ ಕುರಿತಂತೆ ಮಾಹಿತಿ ನೀಡಿರುವಂತ ಅವರು, ನಗರದ ನಾಯಂಡಹಳ್ಳಿ, ವಿಂಡ್ಸನ್ ಮ್ಯಾನರ್ ಅಂಡರ್ ಪಾಸ್ ನಲ್ಲಿ ಮಳೆ ಬಂದ್ರೇ ವಾಹನ ನಿಲ್ಲಿಸಲಾಗುತ್ತಿದೆ. ಹೀಗೆ ವಾಹನ ನಿಲ್ಲಿಸೋದ್ರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿ, ಟ್ರಾಫಿಕ್ ಜಾಮ್ ಆಗುತ್ತಿದೆ ಎಂದರು.

BREAKING: ಸ್ಪೈಸ್ ಜೆಟ್ ನಷ್ಟದ ಹೊಣೆ ಹೊತ್ತು ಸಿಎಫ್ಒ ಸ್ಥಾನಕ್ಕೆ ಸಂಜೀವ್ ತನೇಜಾ ರಾಜೀನಾಮೆ | SpiceJet CFO Sanjeev Taneja resigns

ನಗರದಲ್ಲಿನ ಅಂಡರ್ ಪಾಸ್ ಗಳಲ್ಲಿ ವಾಹನ ನಿಲ್ಲಿಸೋದ್ರಿಂದ ಭಾರೀ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಿ ಅಪಘಾತಗಳಾಗುತ್ತಿವೆ. ಈ ಹಿನ್ನಲೆಯಲ್ಲಿ ನಗರದ ಯಾವುದೇ ಅಂಡರ್ ಪಾಸ್ ಗಳಲ್ಲಿ ಇನ್ಮುಂದೆ ವಾಹನ ನಿಲ್ಲಿಸುವಂತಿಲ್ಲ. ನಿಲ್ಲಿಸಿದ್ರೇ ಅಂತಹ ವಾಹನಗಳ ಮಾಲೀಕರ ವಿರುದ್ಧ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ಭಾವೈಕ್ಯಕ್ಕೆ ಸಾಕ್ಷಿಯಾದ ಎನ್ಆರ್ ಪುರದ ಗಣಪತಿ ಹಬ್ಬ: ಇಲ್ಲಿ ಗಣೇಶೋತ್ಸವಕ್ಕೆ ಮುಸ್ಲಿಂ ಲೇಡಿ ಪ್ರೆಸಿಡೆಂಟ್

Share.
Exit mobile version