ಬೆಂಗಳೂರು: ನಗರದಲ್ಲಿ ಮಳೆ ಬಂದ್ರೆ ಸಾಕು ಭಾರೀ ಅಂವಾತಂರವೇ ಸೃಷ್ಠಿಯಾಗುತ್ತದೆ. ಅಲ್ಲಲ್ಲಿ ಮಳೆಯಿಂದ ರಸ್ತೆಗಳು ಕೆರೆಯಂತಾದ್ರೆ, ಕೆಲವೆಡೆ ಮನೆಗೆ ಮಳೆ ನೀರು ನುಗ್ಗಿ ಜನರ ಬದುಕೇ ಬೀದಿಗೆ ಬೀಳುವಂತಾಗುತ್ತೆ. ಈ ಎಲ್ಲಾ ಮಳೆ ಅವಂತಾರವನ್ನು ನಿರ್ವಹಣೆ ಮಾಡೋದಕ್ಕಾಗಿ ಬಿಬಿಎಂಪಿ ಸನ್ನದ್ಧವಾಗಿದೆ. ಅದಕ್ಕಾಗಿ ವಿಪತ್ತು ನಿರ್ವಹಣೆಯಡಿ ಬಿಬಿಎಂಪಿ‌ ವಲಯವಾರು ಕಂಟ್ರೋಲ್ ರೂಂ ಸ್ಥಾಪನೆ ಸ್ಥಾಪನೆ ಮಾಡಲಾಗಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು, ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣೆಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದು, 24/7 ಕಾರ್ಯನಿರ್ವಹಿಸುವ ಉಚಿತ ಸಹಾಯವಾಣಿ ಸಂಖ್ಯೆ 1533 ಜೊತೆಗೆ ಮಹಾನಗರದ ವಿವಿಧ ಎಂಟು ವಲಯಗಳಲ್ಲಿ ಪ್ರತ್ಯೇಕವಾಗಿ ಕಂಟ್ರೋಲ್ ರೂಮ್‌ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದೆ.

ಹೀಗಿದೆ ವಲಯವಾರು ಕಂಟ್ರೋಲ್ ರೂಮ್‌ಗಳ ಸಂಪರ್ಕ ಸಂಖ್ಯೆ 

ಬೊಮ್ಮನಹಳ್ಳಿ-080-25732447,25735642,9480685707

ದಾಸರಹಳ್ಳಿ-080-28394909,9480685709

ಪೂರ್ವ ವಲಯ-080-22975803,9480685702

ಮಹದೇವಪುರ-080-28512300,9480685706

ರಾಜರಾಜೇಶ್ವರಿ ನಗರ-080-28601851,9480685708

ದಕ್ಷಿಣ ವಲಯ-9480685704,8026566362,8022975703

ಪಶ್ಚಿಮ ವಲಯ- 080-23463366,23561692,9480685703

ಯಲಹಂಕ-080-23636671,22975936,9480685705

ಈ ಮೇಲ್ಕಂಡ ವಲಯವಾರು ಸಂಖ್ಯೆಗಳಿಗೆ ಬೆಂಗಳೂರಿನ ನಾಗರಿಕರು ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಿ. ತಮ್ಮ ವ್ಯಾಪ್ತಿಯಲ್ಲಿನ ಮಳೆ ಅವಾಂತರದ ನಿರ್ವಹಣೆಗಾಗಿ ಕ್ರಮ ವಹಿಸಲಾಗುತ್ತದೆ ಎಂಬುದಾಗಿ ಪ್ರಕಟಣೆ ಬಿಬಿಎಂಪಿ ತಿಳಿಸಿದೆ.

‘SSLC ಪರೀಕ್ಷೆಯಲ್ಲಿ ಫೇಲ್’ ಆದ ವಿದ್ಯಾರ್ಥಿಗಳೇ ಗಮನಿಸಿ: ‘ಮರು ಪರೀಕ್ಷೆ’ ದಿನಾಂಕ ಪ್ರಕಟ | SSLC Main Exam-2 Timetable

ನಾನು ಕಥಾನಾಯಕನಾದರೆ ಡಿಸಿಎಂ ಡಿಕೆ ಶಿವಕುಮಾರ್ ಖಳನಾಯಕ : ಮಾಜಿ ಸಿಎಂ HD ಕುಮಾರಸ್ವಾಮಿ ವಾಗ್ದಾಳಿ

Share.
Exit mobile version