ಬೆಂಗಳೂರು: ಮಾರ್ಚ್ 25 ರಿಂದ ಏಪ್ರಿಲ್ 26ರವರೆಗೂ ನಡೆದ ಎಸ್.ಎಲ್.ಎಲ್‌.ಸಿ ಪರೀಕ್ಷಾ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಇಂದು ಪ್ರಕಟಿಸಿದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದಂತ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ-2ಕ್ಕೆ ಅಂದರೆ ಮರು ಪರೀಕ್ಷೆಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದೆ. ಒಟ್ಟು 4.36.138 ವಿದ್ಯಾರ್ಥಿಗಳಲ್ಲಿ (ಗಂಡು) 2.87.416 ಮಂದಿ ಉತ್ತೀರ್ಣರಾಗಿದ್ದಾರೆ. (ಶೇಕಡಾ 65.90%) ಒಟ್ಟು 4.23.829 ವಿದ್ಯಾರ್ಥಿನಿಯರಲ್ಲಿ 3.41.778 ಮಂದಿ ಉತ್ತೀರ್ಣರಾಗಿದ್ದಾರೆ.

ನಗರ ಪ್ರದೇಶದಲ್ಲಿ 4.93.900 ವಿದ್ಯಾರ್ಥಿಗಳಲ್ಲಿ 35.97.703 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. (72.83%) ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 3.66.067 ಮಂದಿ ಉತ್ತೀರ್ಣರಾಗಿದ್ದಾರೆ.

ಒಟ್ಟು 5.906 ಸರ್ಕಾರಿ ಶಾಲೆಗಳಲ್ಲಿ 72.46% , 3.666 ಅನುದಾನ ಶಾಲೆಗಳಲ್ಲಿ 72.22%, 6.144 ಅನುದಾನ ರಹಿತ ಶಾಲೆಗಳು ಫಲಿತಾಂಶವಾಗಿದೆ.

625 ಕ್ಕೆ 625 ಅಂಕಿತಾ ಬಸಪ್ಪಾ ಕನ್ನೂರ ಬಾಗಲಕೋಟೆ ಜಿಲ್ಲೆಯ ಮುರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ‌ ಸ್ಥಾನ ಪಡೆದಿದ್ದಾರೆ. 7 ಮಂದಿ ವಿದ್ಯಾರ್ಥಿಗಳು 624 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ.

ಎಸ್ ಎಸ್ ಎಲ್ ಸಿ ಮರು ಪರೀಕ್ಷೆಗೆ ದಿನಾಂಕ ಪ್ರಕಟ

  • ಜೂನ್ 07, ಶುಕ್ರವಾರ: ಪ್ರಥಮ ಮತ್ತು ತೃತೀಯ ಭಾಷೆ
  • ಜೂನ್ 8 ಶನಿವಾರ, NSQF( ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್ ಇತರೆ)
  • ಜೂನ್ 10 ಸೋಮವಾರ: ಕೋರ್ ಸಬ್ಜೆಕ್ಟ್ (ಗಣಿತ, ಸಮಾಜ ವಿಜ್ಞಾನ)
  • ಜೂನ್ 11 ಮಂಗಳವಾರ: ಅರ್ಥಶಾಸ್ತ್ರ
  • ಜೂನ್ 12 ಬುಧವಾರ: ವಿಜ್ಞಾನ, ರಾಜ್ಯಶಾಸ್ತ್ರ
  • ಜೂನ್ 13 ಗುರುವಾರ:  ದ್ವಿತೀಯ ಭಾಷೆ (ಕನ್ನಡ, ಇಂಗ್ಲಿಷ್)
  • ಜೂನ್ 14 ಶುಕ್ರವಾರ: ಸಮಾಜಶಾಸ್ತ್ರ

ಇನ್ನೂ ಜೂನ್.7ರಿಂದ ಆರಂಭಗೊಳ್ಳಲಿರುವಂತ ಎಸ್ ಎಸ್ ಎಲ್ ಸಿ ಪರೀಕ್ಷೆ-2 ಅಂದು ಬೆಳಿಗ್ಗೆ 10.15ರಿಂದ ಆರಂಭಗೊಂಡು, ಮಧ್ಯಾಹ್ನ 1.15ರವರೆಗೆ ನಡೆಯಲಿದೆ.

ಚುನಾವಣಾ ಚರ್ಚೆಯಲ್ಲಿ ಚರ್ಮದ ಬಣ್ಣವನ್ನು ತರುವ ಮೂಲಕ ಪ್ರಧಾನಿ ‘ಜನಾಂಗೀಯವಾದಿ’ ಆಗಿದ್ದಾರೆ : ಚಿದಂಬರಂ

ಕುಮಾರಸ್ವಾಮಿ ಮಗಳ ವಯಸ್ಸಿನವಳನ್ನು ಮದುವೆಯಾಗಿದ್ದಾರೆ: ಕಾಂಗ್ರೆಸ್‌ ಶಾಸಕ ಎಸ್‌ಆರ್‌ ಶ್ರೀನಿವಾಸ್‌

Share.
Exit mobile version