ಚಿಕ್ಕಮಗಳೂರು: ವಾದ-ವಿವಾದ, ಪ್ರತಿರೋಧಗಳ ಮಧ್ಯೆ ರಾಜ್ಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ( Gowri Ganesh Festival ) ಕಳೆಕಟ್ಟಿದೆ. ಈದ್ಗಾ ಮೈದಾನದಲ್ಲಿ ಗಣೇಶೋತ್ಸವ, ಸಾವರ್ಕರ್ ಗಣೇಶೋತ್ಸವ, ಅಪ್ಪು ಗಣೇಶೋತ್ಸವ ಹೀಗೆ ಈ ವರ್ಷ ನಾನಾ ರೂಪದಲ್ಲಿ ವಿಘ್ನ ವಿನಾಯಕನ ಹಬ್ಬ ನಡೆಯುತ್ತಿದೆ. ಆದರೆ, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದ ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯೆಕ್ಷೆಯಾಗಿ( Muslim Women President ), ಗಣಪತಿ ಕೂರಿಸಿ, ಪೂಜೆ ಮಾಡಿ ನಾವೆಲ್ಲ ಒಂದು ಎಂಬ ಸಾಮಾಜಿಕ ಸಾಮರಸ್ಯದ ಸಂದೇಶ ಸಾರಿದ್ದಾರೆ.

ಜುಬೇದಾ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಪಟ್ಟಣ ಪಂಚಾಯಿತಿ ಅಧ್ಯಕ್ಷೆ , ಎನ್.ಆರ್.ಪುರ ರಾಜೀವ್ ನಗರದ ಗಣಪತಿ ಸೇವಾ ಸಮಿತಿಯಲ್ಲಿ ಕಳೆದ 13 ವರ್ಷಗಳಿಂದ ಇವರೇ ಅಧ್ಯಕ್ಷರಾಗಿದ್ದಾರೆ.

BIGG NEWS : ‘ಜೀನೋಮ್ ಸೀಕ್ವೆನ್ಸಿಂಗ್’ ಒಳಗಾದ 1029 ಜನರಲ್ಲಿ ‘ಶೇ.1ರಷ್ಟು ಮಂದಿ’ ಅಪಾಯದಲ್ಲಿದ್ದಾರೆ ; ‘ಸಂಶೋಧನೆ’ಯಿಂದ ಶಾಕಿಂಗ್‌ ಸಂಗತಿ

ಇವರ ಅಧ್ಯಕ್ಷತೆಯಲ್ಲಿ ಈ ವರ್ಷವೂ ಕೂಡ ಗಣಪತಿ ಪ್ರತಿಷ್ಠಾಪಿಸಿದ್ದಾರೆ. ಇವರೇ ಪೂಜೆಯನ್ನೂ ಮಾಡುತ್ತಿದ್ದಾರೆ. ಸಮುದಾಯದ ಕಟ್ಟುಪಾಡುಗಳನ್ನು ಬದಿಗಿಟ್ಟು ಎರಡು ದಶಕಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು 13 ವರ್ಷಗಳಿಂದ ಗ್ರಾಮದ ಯುವಕರ ಜೊತೆಗೂಡಿ ಗಣಪತಿ ಉತ್ಸವಕ್ಕೆ ಕೈಜೋಡಿಸಿದ್ದಾರೆ .

ಈ ಕುರಿತು ಮಾತನಾಡಿದಂತ ಗಣಪತಿ ಸಂಘದ ಅಧ್ಯಕ್ಷೆ ಜುಬೇದಾ, ಕಳೆದ 13 ವರ್ಷಗಳಿಂದ ಅಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದೇನೆ. ಇಡೀ ದೇಶದಲ್ಲಿ ಕೋಮುಗಲಭೆ, ಜಾತಿ-ಜಾತಿಗಳ ನಡುವೆ ಕಿತ್ತಾಟ ನಡೆಯುತ್ತಿದೆ. ಆದ್ರೇ ಎನ್ ಆರ್ ಪುರದಲ್ಲಿ ಅದ್ಯಾವುದು ಇಲ್ಲ. ಹಿಂದೂ-ಮುಸ್ಲೀಂ ಸಮುದಾಯದವರು ಒಂದಾಗಿ ಗಣೇಶೋತ್ಸವ ಆಚರಿಸಲಾಗುತ್ತದೆ ಎಂದರು.

Karnataka Politics: ಕಾಂಗ್ರೆಸ್ ನೀಡಿದ 173 ಭರವಸೆಗಳಲ್ಲಿ ಈಡೇರಿಸಿದ್ದು ಕೇವಲ 67 ಮಾತ್ರ – ಬಿಜೆಪಿ

ಈ ಗಣಪತಿಯನ್ನು ನಾವು ಚಿಕ್ಕವರಿದ್ದಾಗಿನಿಂದ ತಂದೆ-ತಾಯಿ ಕಲಿಸಿದಂತ ಜಾತ್ಯಾತೀತ ನಡೆಯಿಂದ ಆಚರಿಸಲಾಗುತ್ತಿದೆ. ಈ ಸಂಪ್ರದಾಯ ನಮ್ಮ ಮುಂದಿನ ಪೀಳಿಗೆ, ಮಕ್ಕಳಿಗೂ ಜಾತ್ಯಾತೀತ ಭಾವನೆ ಮೂಡಲಿ. ವಿವಿಧತೆಯಲ್ಲಿ ಏಕತೆಯ ದೇಶದಲ್ಲಿ ನಾವೆಲ್ಲರೂ ಒಟ್ಟಾಗಿ ಎನ್ ಆರ್ ಪುರದ ರಾಜೀವ್ ನಗರದಲ್ಲಿ ಗಣೇಶೋತ್ಸವ ಆಚರಿಸುತ್ತೇವೆ. ಎಲ್ಲರಿಗೂ ವಿಘ್ನ ವಿನಾಶಕ ಒಳ್ಳೇದು ಮಾಡಲಿ ಎಂದು ಹೇಳಿದರು.

ಜುಬೇದಾ ಅವರ ಉತ್ತೇಜನದಿಂದ ರಾಜೀವ್ ನಗರದ ಎಲ್ಲಾ ಧರ್ಮದ ಯುವಕರು ಕೂಡ ಒಂದಾಗಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಕೇವಲ ಗಣಪತಿ ಹಬ್ಬವನ್ನಷ್ಟೆ ಅಲ್ಲದೆ ಎಲ್ಲಾ ಧರ್ಮದ ಹಬ್ಬಗಳನ್ನು ಹುಡುಗರ ಜೊತೆ ಸೇರಿ ಆಚರಿಸುತ್ತಾರೆ.

ವರದಿ : ದಿನೇಶ್ ಪಟವರ್ಧನ್, ಚಿಕ್ಕಮಗಳೂರು

BIGG NEWS : “ನಾನು ಸತ್ತಿದ್ದೇನೆ ಎಂಬ ಸುದ್ದಿ ಮಾಡಿದ್ರು” ; ‘ವಿಚಿತ್ರ ವದಂತಿ’ ನೆನೆದು ನಕ್ಕ ‘ಜಡೇಜಾ’

Share.
Exit mobile version