ಕೇರಳ: ಕಾಂತಾರ ಚಿತ್ರದಲ್ಲಿ ಬಳಕೆ ಮಾಡಲಾಗಿದ್ದಂತ ವರಾಹ ರೂಪಂ ಹಾಡಿನ ( varaha rupam song ) ಬಗ್ಗೆ ಕಾಪಿ ರೈಟ್ ಕೇಸ್ ದಾಖಲಾಗಿತ್ತು. ಹೊಂಬಾಳೆ ಸಂಸ್ಥೆಯ ವಿರುದ್ಧ ಥೈಕುಡಮ್ ಬ್ರಿಡ್ಜ್ ಸಂಸ್ಥೆಯಿಂದ ಕೇಸ್ ಹಾಕಲಾಗಿತ್ತು. ಹೀಗಾಗಿ ಕೇರಳ ಸ್ಥಳೀಯ ನ್ಯಾಯಾಲಯದಿಂದ ಹಾಡಿನ ಬಳಕೆಗೆ ತಡೆಯಾಜ್ಞೆ ನೀಡಲಾಗಿತ್ತು. ಹೊಂಬಾಳೆ ಸಂಸ್ಥೆಯ ಮೇಲ್ಮನೆಯವನ್ನು ಪರಿಗಣಿಸಿರುವಂತ ಕೇರಳ ಸ್ಥಳೀಯ ನ್ಯಾಯಾಲಯದಿಂದ ಇಂದು ತಜ್ಞೆಯಾಜ್ಞೆ ತೆರವುಗೊಳಿಸಲಾಗಿದೆ. ಹೀಗಾಗಿ ಕಾಂತಾರ ಚಿತ್ರದ ವರಾಹ ರೂಪಂ ಹಾಡು ಇನ್ಮುಂದೆ ಯೂಟ್ಯೂಬ್ ನಲ್ಲಿ ( YouTube ) ಲಭ್ಯವಾಗಲಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು, ದೈವಾನು ದೈವಗಳ ಆಶೀರ್ವಾದ ಹಾಗು ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ OTT ಪ್ಲಾಟ್ ಫಾರಂನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ ಎಂದು ಹೇಳಿದ್ದಾರೆ.
ದೈವಾನು ದೈವಗಳ ಆಶೀರ್ವಾದ ಹಾಗು ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ OTT platform ನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ . @VKiragandur@ChaluveG @AJANEESHB @Karthik1423 @hombalefilms @KantaraFilmhttps://t.co/STsNEyKmuT
— Rishab Shetty (@shetty_rishab) December 3, 2022
ಅಂದಹಾಗೇ ಕಾಂತಾರ ಚಿತ್ರದ ವರಾಹ ರೂಪಂ ಹಾಡಿಗೆ ಕಾಪಿರೈಟ್ ಕೇಸ್ ಹಿನ್ನಲೆಯಲ್ಲಿ ಕೇರಳದ ಕೋಜಿಕ್ಕೋಡ್ ಸ್ಥಳೀಯ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆಯನ್ನು ಹೊಂಬಾಳೆ ಸಂಸ್ಥೆಯಿಂದ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಮನವಿ ಪರಿಗಣಿಸಿದಂತ ಪಾಲಕ್ಕಾಡ್ ಸ್ಥಳೀಯ ನ್ಯಾಯಾಲಯವು ಕೆಲ ದಿನಗಳ ಹಿಂದಷ್ಟೇ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿತ್ತು.
BREAKING: ಮಧುಗಿರಿಯ ಕೊಡಿಗೇನಹಳ್ಳಿಯಲ್ಲಿ ಬಾಲಕ ಸಾವು ಪ್ರಕರಣ: ಕೆಲಸದಿಂದ ಆಂಬುಲೆನ್ಸ್ ಚಾಲಕ ವಜಾ
ಇನ್ನೂ ಕೋಜಿಕ್ಕೋಡ್ ಸ್ಥಳೀಯ ನ್ಯಾಯಾಲಯದಿಂದ ಕಾಂತಾರ ಚಿತ್ರದ ವಾರಾಹ ರೂಪಂ ಚಿತ್ರದ ಹಾಡಿನ ಬಳಕೆಗೆ ತಡೆಯಾಜ್ಞೆ ಹಾಗೇ ಉಳಿದಿತ್ತು. ಇಂದು ಈ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದೆ. ಹೀಗಾಗಿ ಕೋಜಿಕ್ಕೋಡ್ ಹಾಗೂ ಪಾಲಕ್ಕೋಡ್ ನ ಎರಡು ಕೋರ್ಟ್ ನಿಂದ ತಡೆಯಾಜ್ಞೆ ತೆರವುಗೊಂಡ ಕಾರಣ, ವರಾಹ ರೂಪಂ ಹಾಡು ಓಟಿಟಿಯಲ್ಲಿ ಮತ್ತೆ ಬಿಡುಗಡೆ ಆಗಲಿದೆ.