ಬೆಂಗಳೂರು : ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ಮಾರ್ಚ್ ತಿಂಗಳಿನಲ್ಲಿ ಕರ್ನಾಟಕದ 2ನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭವಾಗಲಿದೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದು ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಸಭೆ ನಡೆಸಿದ್ದು, ಎರಡನೇ ರೈಲು ಸಂಚಾರದ ಕುರಿತು ಮಾತನಾಡಿದರು.
ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ಜೋಡಿಮಾರ್ಗ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಎರಡು ನಗರಗಳ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ಓಡಿಸಲು ಯೋಜಿಸಲಾಗಿದೆ” ಎಂದರು. ಮಾರ್ಚ್ 2023ರೊಳಗೆ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಈ ಮಾರ್ಗದಲ್ಲಿ ಓಡಿಸಲು ಸಿದ್ದತೆ ನಡೆಸಿದ್ದೇವೆ ಎಂದು ಹೇಳಿದರು. ಈ ಮೂಲಕ ಮಾರ್ಚ್ ತಿಂಗಳಿನಲ್ಲಿ ಕರ್ನಾಟಕದ 2ನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭವಾಗಲಿದ್ದು, ಹುಬ್ಬಳ್ಳಿ ಜನತೆಗೆ ಇದರಿಂದ ಗುಡ್ ನ್ಯೂಸ್ ಸಿಕ್ಕಂತಾಗಿದೆ.
BREAKING NEWS : ‘ಏರ್ ಇಂಡಿಯಾ ವಿಮಾನ’ದಲ್ಲಿ ತಾಂತ್ರಿಕ ದೋಷ, ತುರ್ತು ಭೂಸ್ಪರ್ಶ
ಸಮುದಾಯಗಳ ಪ್ರಗತಿಗೆ ಶೈಕ್ಷಣಿಕ ಅಭಿವೃದ್ಧಿ ಅನಿವಾರ್ಯ- ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ