ರಾಮನಗರ : ವಸತಿ ಸಚಿವ ಸುಳ್ಳು ಸೋಮಣ್ಣ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಚಿವ ಸೋಮಣ್ಣ ( V.Somanna) ತಿರುಗೇಟು ನೀಡಿದ್ದಾರೆ.
ಕನಕಪುರದ ಬಿಳಿದಾಳೆ ಗ್ರಾಮದಲ್ಲಿ ಮಾತನಾಡಿದ ಸಚಿವ ಸೋಮಣ್ಣ ನಮ್ಮನ್ನು ಬೆಳೆಸಿದವರು ದೇವೇಗೌಡರು. ನಾನು ಸಂಸ್ಕಾರದಿಂದ ಬಂದಿದ್ದೇನೆ. ಸಂಸ್ಕಾರದಿಂದ ಇದ್ದೇನೆ. ಕುಮಾರಸ್ವಾಮಿ ನಾಲಿಗೆ ಬಿಗಿಹಿಡಿದು ಮಾತನಾಡಲಿ ಎಂದಿದ್ದಾರೆ.
ಮಾಜಿ ಸಿಎಂ ಅಗಿದ್ದ ಕುಮಾರಸ್ವಾಮಿ ತಮ್ಮ ಪೂರ್ವಾಗ್ರಹ ನೋಡಿಕೊಳ್ಳಲಿ. ನಾನು ದೇವೇಗೌಡರು, ಚೆನ್ನಮ್ಮರನ್ನು ನೋಡಿ ಬೆಳೆದವನು. ನಾನು ಈಗಾಗಲೇ ಚನ್ನಪಟ್ಟಣಕ್ಕೆ ಸಾಕಷ್ಟು ಮನೆಗಳನ್ನು ಕೊಟ್ಟಿದ್ದೇನೆ. ಇನ್ನೂ ಕೊಡ್ತೇನೆ. ಆದರೆ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು, ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ, 48,000 ಸಂಬಳ
ಎಂ.ಪಿ.ಇ ಸೊಸೈಟಿಯ ಸಿ.ಬಿ.ಎಸ್.ಇ. ಸೆಂಟ್ರಲ್ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಪಾಲಕರ ಕ್ರೀಡಾಕೂಟ