ಮಥುರಾ(ಉತ್ತರ ಪ್ರದೇಶ): ಅನೈತಿಕ ಸಂಬಂಧ ಪ್ರಶ್ನಿಸಿದಕ್ಕೆ ಪತ್ನಿಯೊಬ್ಬಳು ತನ್ನ ಪತಿಗೇ ಬೆಂಕಿ ಹಚ್ಚಿ ಕೊಂದಿರುವ ಘಟನೆ ಸೋಮವಾರ ಮಥುರಾ ಜಿಲ್ಲೆಯ ಕೋಸಿಕಲನ್ ಪಟ್ಟಣದಲ್ಲಿ ನಡೆದಿದೆ.
ಏನಿದು ಘಟನೆ?
ವರದಿಗಳ ಪ್ರಕಾರ, ರೇಖಾ ಎಂಬ ವಿವಾಹಿತ ಮಹಿಳೆ ಪರ ಪುರುಷನೊಂದಿಗೆ ಸಂಬಂಧ ಹೊಂದಿದ್ದಳು. ವಿಷಯ ತಿಳಿದ ಆಕೆಯ ಪತಿ ಚಮನ್ ಪ್ರಕಾಶ್ ಅದನ್ನು ವಿರೋಧಿಸಿದರು. ಈ ವಿಷಯವಾಗಿ ದಂಪತಿ ನಡುವೆ ವಾಗ್ವಾದ ನಡೆದಿತ್ತು. ಸೋಮವಾರ ಸಂಜೆ ಚಮನ್ ಗಾಢ ನಿದ್ದೆಯಲ್ಲಿದ್ದಾಗ ರೇಖಾ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಚಮನ್ನ ಕಿರುಚಾಟ ಕೇಳಿ ಅಕ್ಕಪಕ್ಕದವರು ಓಡಿ ಬಂದು ಬೆಂಕಿ ನಂದಿಸಿ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ತೀವ್ರ ಸುಟ್ಟ ಗಾಯಗಳಾಗಿದ್ದ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೋಸಿಕಲನ್ ಪೊಲೀಸ್ ಠಾಣೆ ಪ್ರಭಾರಿ ಅನುಜ್ ಕುಮಾರ್ ಮಾತನಾಡಿ, ಮೃತ ಚಮನ್ ಪ್ರಕಾಶ್ ಕುಟುಂಬದಿಂದ ದೂರು ಸ್ವೀಕರಿಸಿದ್ದೇವೆ. ರೇಖಾ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
BIGG NEWS: ಚೀನಾದಲ್ಲಿ ಹೊಸ ಲ್ಯಾಂಗ್ಯಾ ವೈರಸ್ ಪತ್ತೆ; ಇದು ಎಂದರೇನು? ಇದರ ಲಕ್ಷಣಗಳೇನು? ಇಲ್ಲಿದೆ ವಿವರ
Video: ಬೈಕ್ಅನ್ನು ಹಿಂತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಆಳದ ಗುಂಡಿಗೆ ಬಿದ್ದ ವ್ಯಕ್ತಿ!