ಮುಜಾಫರ್ನಗರ(ಉತ್ತರ ಪ್ರದೇಶ): ಗ್ರಾಮದ ಮುಖಂಡ ಹಾಗೂ ಗ್ರಾಮದ ಮಾಜಿ ಮುಖಂಡನೋರ್ವ ದಲಿತ ಯುವಕನೊಬ್ಬನಿಗೆ ಚಪ್ಪಲಿಯಿಂದ ಥಳಿಸಿರುವ ಘಟನೆ ಜಿಲ್ಲೆಯ ಛಾಪರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
In Muzaffarnagar, a self-proclaimed upper caste village headman is beating a Dalit man with slipper and also threatening to kill him. The devotees who say that caste has ended, we are all Hindus, where are they? pic.twitter.com/pUZoc08FoO
— Kanchana Yadav (@Kanchanyadav000) August 20, 2022
ವಿಡಿಯೋ ವೈರಲ್ ಆಗುತ್ತಿದ್ದಂತೇ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಗ್ರಾಮದ ಮುಖಂಡನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ಈ ಮಾಹಿತಿ ನೀಡಿದ್ದಾರೆ.
ಪೊಲೀಸರ ಪ್ರಕಾರ, ತಾಜ್ಪುರದ ಗ್ರಾಮದ ಮುಖ್ಯಸ್ಥ ಶಕ್ತಿ ಮೋಹನ್ ಗುರ್ಜರ್ ಮತ್ತು ರೆಟಾ ನಾಗ್ಲಾ ಗ್ರಾಮದ ಮಾಜಿ ಮುಖ್ಯಸ್ಥ ಗಜೆ ಸಿಂಗ್ ಅವರು ದಲಿತ ಯುವಕ ದಿನೇಶ್ ಕುಮಾರ್ (27) ನನ್ನು ಚಪ್ಪಲಿಯಿಂದ ಹೊಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಗ್ರಾಮದ ಮುಖಂಡ ಶಕ್ತಿ ಮೋಹನ್ನನ್ನು ಈಗಾಗಲೇ ಬಂಧಿಸಲಾಗಿದೆ. ಎರಡನೇ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಅರ್ಪಿತ್ ವಿಜಯವರ್ಗಿಯಾ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
BREAKING NEWS: ಜಮ್ಮುಕಾಶ್ಮೀರದ ಬಂಡಿಪೋರಾದಲ್ಲಿ ಭಯೋತ್ಪಾದಕನ ಬಂಧನ; ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಕ್ಕೆ
BIGG NEWS : ರಾಜ್ಯದಲ್ಲಿ 20 ಕಡೆ ಆಡಳಿತ ಸೌಧ ನಿರ್ಮಾಣ : ಸಚಿವ ಆರ್.ಅಶೋಕ್
BREAKING NEWS: ಜಮ್ಮುಕಾಶ್ಮೀರದ ಬಂಡಿಪೋರಾದಲ್ಲಿ ಭಯೋತ್ಪಾದಕನ ಬಂಧನ; ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಕ್ಕೆ