ನೆಲಮಂಗಲ : ಧರ್ಮಸ್ಥಳದ ಎಸ್ಡಿಎಂಇ ಸೊಸೈಟಿ ನೆಲಮಂಗಲದ ಮಹದೇವಪುರದ ರಾಷ್ಟ್ರೀಯ ಹೆದ್ದಾರಿ 75ರ ಸಮೀಪದಲ್ಲಿ ಸ್ಥಾಪಿಸಿರುವ ಮೂರನೇ ನಿಸರ್ಗದತ್ತ ಆರೋಗ್ಯ ಕ್ಷೇಮಪಾಲನಾ ಕೇಂದ್ರವಾದ ಕ್ಷೇಮವನ ಸೆ.1ರಂದು ಬೆಳಗ್ಗೆ 11.45ಕ್ಕೆ ಉದ್ಘಾಟನೆಗಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಲಿದ್ದಾರೆ.
ʻ ಕಾಫಿ-ಟೀ ಜತೆಗೆ ಔಷಧಿʼ ಸೇವಿಸುತ್ತೀರಾ? ಆರೋಗ್ಯಕ್ಕೆ ಎದುರಾಗುತ್ತೆ ಈ ʻದೊಡ್ಡ ಕಂಟಕ ʼ ? ಇಲ್ಲಿದೆ ಓದಿ
ತಾಲೂಕಿನ ಮಹದೇವಪುರ ಗ್ರಾಮದ ಸಮೀಪ 20 ಎಕರೆಯಲ್ಲಿ 93 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕ್ಷೇಮವನ ಬೆಂಗಳೂರು ಹಾಗೂ ಸುತ್ತಮುತ್ತಲ ಹತ್ತಾರು ಜಿಲ್ಲೆಯ ಜನರಿಗೆ ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಅನುಕೂಲವಾಗಲಿದೆ.
ʻ ಕಾಫಿ-ಟೀ ಜತೆಗೆ ಔಷಧಿʼ ಸೇವಿಸುತ್ತೀರಾ? ಆರೋಗ್ಯಕ್ಕೆ ಎದುರಾಗುತ್ತೆ ಈ ʻದೊಡ್ಡ ಕಂಟಕ ʼ ? ಇಲ್ಲಿದೆ ಓದಿ
ಇಂತಹ ವಿಶೇಷತೆ ಹೊಂದಿರುವ ಕ್ಷೇಮವನ ಸೆ. 1ರಂದು ಉದ್ಘಾಟನೆಯಾಗುತ್ತಿದ್ದು, ಕಾರ್ಯಕ್ರಮದಲ್ಲಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಅತಿಥಿಗಳಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಸಭಾ ಸದಸ್ಯರು ಹಾಗೂ ಧರ್ಮಸ್ಥಳದ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ.