Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಸೇವಾನಿರತ ಶಿಕ್ಷಕರು `TET’ ಪಾಸಾಗುವುದು ಕಡ್ಡಾಯ : ಸುಪ್ರೀಂಕೋರ್ಟ್ ಪುನರುಚ್ಚಾರ

ALERT :ಟೂತ್‌ ಬ್ರಷ್ ತೊಳೆಯುವಾಗ ನೀವೂ ಈ ತಪ್ಪು ಮಾಡ್ತಿದ್ದೀರಾ? ನಿಮ್ಮ ದೇಹ ಸೇರುತ್ತಿದೆ ಕೋಟ್ಯಂತರ ಬ್ಯಾಕ್ಟೀರಿಯಾ!

ಹಸಿಮೆಣಸಿನಕಾಯಿ Vs ಒಣಮೆಣಸಿನಕಾಯಿ: ಆರೋಗ್ಯಕ್ಕೆ ಯಾವುದು ಬೆಸ್ಟ್?ತಿಳಿಯಿರಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ‘ಸ್ವರ್ಣ ಪ್ರಾಶನ’ ಮಕ್ಕಳ ಸದೃಢ ಆರೋಗ್ಯಕ್ಕೆ ಸಹಕಾರಿಯೇ? ಇಲ್ಲಿದೆ ಮಾಹಿತಿ
LIFE STYLE

ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ‘ಸ್ವರ್ಣ ಪ್ರಾಶನ’ ಮಕ್ಕಳ ಸದೃಢ ಆರೋಗ್ಯಕ್ಕೆ ಸಹಕಾರಿಯೇ? ಇಲ್ಲಿದೆ ಮಾಹಿತಿ

By ವಸಂತ ಬಿ ಈಶ್ವರಗೆರೆ

“ಸ್ವರ್ಣ ಪ್ರಾಶನ” ಮಕ್ಕಳ ಸದೃಢ ಆರೋಗ್ಯಕ್ಕೆ ಸಹಕಾರಿಯೇ?

ಪೋಷಕರು ತಮ್ಮ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬೆಳವಣಿಗೆಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಮಾಡುತ್ತಿರುತ್ತಾರೆ, ಭವಿಷ್ಯದಲ್ಲಿ ಉನ್ನತಿ ಹೊಂದಲಿ ಎಂದು ಬಯಸುತ್ತಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು ಪದೇಪದೇ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದರಿಂದ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇದಕ್ಕಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದಲ್ಲಿ ತಿಳಿಸಿರುವ ಸ್ವರ್ಣ ಪ್ರಾಶನ ಸಂಸ್ಕಾರ ಉತ್ತಮ ಆಯ್ಕೆಯಾಗಿದೆ.

ಸ್ವರ್ಣಪ್ರಾಶನ ಎಂದರೇನು?

ಸ್ವರ್ಣಪ್ರಾಶನವು ಆಯುರ್ವೇದದಲ್ಲಿ ವಿವರಿಸಲಾದ 16 ಸಂಸ್ಕಾರಗಳಲ್ಲಿ ಒಂದಾಗಿದೆ. ಅದು ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಶುದ್ಧೀಕರಿಸಿದ ಸ್ವರ್ಣವನ್ನು(ಚಿನ್ನ) ಇತರೆ ಔಷದ ದ್ರವ್ಯಗಳೊಂದಿಗೆ ಸೇವನೆಯೋಗ್ಯವಾದ ರೂಪದಲ್ಲಿ ತಯಾರಿಸಿ, ನಿರ್ದಿಷ್ಟ ದಿನದಂದು (ಪುಷ್ಯ ನಕ್ಷತ್ರ) ಅಥವಾ ನಿತ್ಯವೂ ಸೇವಿಸುವುದರಿಂದ ಮಕ್ಕಳ ದೈಹಿಕ ಮಾನಸಿಕ ಮತ್ತು ಬೌದ್ಧಿಕ ಆರೋಗ್ಯವನ್ನು ಉತ್ತಮಗೊಳಿಸಬಹುದಾಗಿದೆ.

ಸ್ವರ್ಣ ಪ್ರಾಶನದಿಂದ ಆಗುವ ಪ್ರಯೋಜನಗಳು

‌ಮಕ್ಕಳ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
‌ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
‌ಸೋಂಕುಗಳನ್ನು ತಡೆಗಟ್ಟುತ್ತದೆ – ಪದೇ ಪದೇ ಕಾಡುವ ಶೀತ, ಕೆಮ್ಮು, ಅಲರ್ಜಿ, ಅಸ್ತಮಾ ಇವುಗಳನ್ನು ಹತೋಟಿಯಲ್ಲಿಡಬಹುದು.
‌ಮಕ್ಕಳ ಗ್ರಹಣ ಶಕ್ತಿ ಮತ್ತು ಆಲೋಚನೆ ಶಕ್ತಿಯನ್ನು ಹೆಚ್ಚಿಸುತ್ತದೆ.
‌ನರಗಳಿಗೆ ಶಕ್ತಿ ನೀಡುತ್ತದೆ – ವಾಕ್ ದೋಷ ಶ್ರವಣದೋಷ, ಶಯ್ಯಾ ಮೂತ್ರ ಹಾಗೂ ಮುಂತಾದ ತೊಂದರೆಗಳನ್ನು ಶಮನಗೊಳಿಸುತ್ತದೆ.
ಒಟ್ಟಾರೆಯಾಗಿ ಸ್ವರ್ಣ ಪ್ರಾಶನವು ಮಕ್ಕಳ ದೈಹಿಕ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿದೆ.

ಸ್ವರ್ಣ ಪ್ರಾಶನವನ್ನು ಯಾರಿಗೆ ಕೊಡಬೇಕು?

ನವಜಾತ ಶಿಶುವಿನಿಂದ 16 ವರ್ಷದವರೆಗೆ ಸ್ವರ್ಣ ಪ್ರಾಶನವನ್ನು ನೀಡಬಹುದು. ಪುಷ್ಯ ನಕ್ಷತ್ರದಂದು ಕೊಡಿಸುವುದಾದರೆ ಸತತವಾಗಿ 21 ತಿಂಗಳವರೆಗೆ ಕೊಡಿಸುವುದು ಪ್ರಯೋಜನಕಾರಿ ಅಥವಾ ಸತತವಾಗಿ ಪ್ರತಿದಿನ ಆರು ತಿಂಗಳವರೆಗೆ ಕೊಡಿಸುವುದು ಕೂಡ ಉಪಯುಕ್ತ.

ಸಾಮಾನ್ಯ ಮಾಹಿತಿ

‌ಸಣ್ಣ ಜ್ವರ, ಶೀತ, ನೆಗಡಿ, ಕೆಮ್ಮು ಇತ್ಯಾದಿ ಸ್ವರ್ಣ ಪ್ರಾಶನಕ್ಕೆ ಅಡ್ಡಿಯಾಗುವುದಿಲ್ಲ. ‌ಆಯುರ್ವೇದದಲ್ಲಿ ತಿಳಿಸಿರುವ ರೀತಿಯಲ್ಲಿ ಶೋಧಿತ ಸ್ವರ್ಣವನ್ನು ಉಪಯೋಗಿಸಿ ತಯಾರಿಸಿದ ಸ್ವರ್ಣ ಪ್ರಾಶನದಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಆಯುರ್ವೇದ ವೈದ್ದರಿಂದ ತೆಗೆದುಕೊಳ್ಳುವುದು ಉತ್ತಮ ಆಯ್ಕೆ. ‌ಹೆಚ್ಚು ದಿನಗಳ ವರೆಗೆ ಹಾಕಿದಲ್ಲಿ ಹೆಚ್ಚು ಪರಿಣಾಮಕಾರಿ.

‌ಸ್ವರ್ಣ ಪ್ರಾಶನವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಕುವುದು ಉತ್ತಮ. ಹಾಕಿದ 15 ನಿಮಿಷಗಳ ನಂತರ ಆಹಾರವನ್ನು ಕೊಡಬಹುದು. ‌ಸಾಮಾನ್ಯವಾಗಿ ಎಣ್ಣೆ ಪದಾರ್ಥ ಬೇಕರಿ ಪದಾರ್ಥ, ಚಾಟ್ಸ್, ಚಾಕಲೇಟ್ ಮುಂತಾದ ಪಚನಕ್ರಿಯೆಯನ್ನು ದುರ್ಬಲಗೊಳಿಸುವ ಆಹಾರವನ್ನು ಕೊಡಬಾರದು. ಸ್ವರ್ಣ ಪ್ರಾಶನ ವಿಧಾನವು ಸಂಪೂರ್ಣವಾಗಿ ಸುರಕ್ಷಿತವಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಿ.

ಸ್ವರ್ಣ ಪ್ರಾಶನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಬೇಕಿದ್ದಲ್ಲಿ ಸಂಪರ್ಕಿಸಿ – 8660885793. ದೈನಂದಿನ ಆರೋಗ್ಯದ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಲು 8660885793 ಮೇಸೆಜ್ ಮಾಡಿ.

ಲೇಖಕರು: ಡಾ. ಪ್ರವೀಣ್ ಕುಮಾರ್ BAMS, MD, ಆಯುರ್ವೇದ ವೈದ್ಯರು.

BREAKING: ಉತ್ತರ ಪ್ರದೇಶದಲ್ಲಿ ರೈಲ್ವೆ ನಿಲ್ದಾಣದ ಮೇಲ್ಛಾವಣಿ ಕುಸಿದು 20 ಕಾರ್ಮಿಕರು ಸಿಲುಕಿರುವ ಶಂಕೆ | Watch Video

BREAKING : 11 ಮಂದಿ `DYSP’ (ಸಿವಿಲ್) ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ | DYSP Transfer

Share. Facebook Twitter LinkedIn WhatsApp Email

Related Posts

ಹಸಿಮೆಣಸಿನಕಾಯಿ Vs ಒಣಮೆಣಸಿನಕಾಯಿ: ಆರೋಗ್ಯಕ್ಕೆ ಯಾವುದು ಬೆಸ್ಟ್?ತಿಳಿಯಿರಿ

2 Mins Read

Health Tips: ದಿನಕ್ಕೆ 4 ಮೊಟ್ಟೆ ತಿಂದರೆ ದೇಹದಲ್ಲಿ ಏನಾಗುತ್ತದೆ? ಇಲ್ಲಿದೆ ತಜ್ಞರ ಶಾಕಿಂಗ್ ಮಾಹಿತಿ!

2 Mins Read

Fatty Liver: ಈ ರೀತಿ ಅಡುಗೆ ಎಣ್ಣೆ ಬದಲಾಯಿಸಿ, ಫ್ಯಾಟಿ ಲಿವರ್ ಸಮಸ್ಯೆಗೆ ಗುಡ್‌ಬೈ ಹೇಳಿ, ಯಕೃತ್ತಿನ ಆರೋಗ್ಯ ಕಾಪಾಡಿ!

3 Mins Read
Recent News

BIG NEWS : ಸೇವಾನಿರತ ಶಿಕ್ಷಕರು `TET’ ಪಾಸಾಗುವುದು ಕಡ್ಡಾಯ : ಸುಪ್ರೀಂಕೋರ್ಟ್ ಪುನರುಚ್ಚಾರ

ALERT :ಟೂತ್‌ ಬ್ರಷ್ ತೊಳೆಯುವಾಗ ನೀವೂ ಈ ತಪ್ಪು ಮಾಡ್ತಿದ್ದೀರಾ? ನಿಮ್ಮ ದೇಹ ಸೇರುತ್ತಿದೆ ಕೋಟ್ಯಂತರ ಬ್ಯಾಕ್ಟೀರಿಯಾ!

ಹಸಿಮೆಣಸಿನಕಾಯಿ Vs ಒಣಮೆಣಸಿನಕಾಯಿ: ಆರೋಗ್ಯಕ್ಕೆ ಯಾವುದು ಬೆಸ್ಟ್?ತಿಳಿಯಿರಿ

​ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ: LPG ದಾಸ್ತಾನು ಹೆಚ್ಚಿಸಲು ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ

State News
KARNATAKA

ALERT :ಟೂತ್‌ ಬ್ರಷ್ ತೊಳೆಯುವಾಗ ನೀವೂ ಈ ತಪ್ಪು ಮಾಡ್ತಿದ್ದೀರಾ? ನಿಮ್ಮ ದೇಹ ಸೇರುತ್ತಿದೆ ಕೋಟ್ಯಂತರ ಬ್ಯಾಕ್ಟೀರಿಯಾ!

By kannadanewsnow57 KARNATAKA 2 Mins Read

ಆರೋಗ್ಯಕರ ಹಲ್ಲು ಮತ್ತು ಒಸಡುಗಳಿಗಾಗಿ ನಾವು ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಬ್ರಷ್ ಮಾಡುತ್ತೇವೆ. ಆದರೆ, ನಮ್ಮ ಬಾಯಿ ಸ್ವಚ್ಛಗೊಳಿಸುವ…

ಹಸಿಮೆಣಸಿನಕಾಯಿ Vs ಒಣಮೆಣಸಿನಕಾಯಿ: ಆರೋಗ್ಯಕ್ಕೆ ಯಾವುದು ಬೆಸ್ಟ್?ತಿಳಿಯಿರಿ

ಹುಡುಗರು ಕಿವಿ ಚುಚ್ಚಿಸಿಕೊಳ್ಳಬಹುದೇ? ಹಿಂದೂ ಸಂಪ್ರದಾಯದ ಹಿಂದಿರುವ ಅಸಲಿ ಕಾರಣಗಳಿವು!

ALERT : ತಂಬಾಕು ಪ್ರಿಯರೇ ಎಚ್ಚರ : ಯುವ ಜನರಲ್ಲಿ ಹೆಚ್ಚುತ್ತಿದೆ `ಕ್ಯಾನ್ಸರ್’ ಕಂಟಕ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.