ಸಿಂಗಿಂಗ್ : ಅರುಣಾಚಲ ಪ್ರದೇಶದ ಸಿಂಗಿಂಗ್ ಗ್ರಾಮದ ಬಳಿ ಐದು ಜನರಿದ್ದ ಹೆಲಿಕಾಪ್ಟರ್ ಶುಕ್ರವಾರ ಅಪ್ಪರ್ ಸಿಯಾಂಗ್ ಜಿಲ್ಲೆಯ ಟ್ಯೂಟಿಂಗ್ ಮುಖ್ಯಕಚೇರಿಯಿಂದ 25 ಕಿಲೋಮೀಟರ್ ದೂರದಲ್ಲಿರುವ ಸಿಂಗಿಂಗ್ ಗ್ರಾಮದ ಬಳಿ ಪತನಗೊಂಡಿದೆ. ಭಾರತೀಯ ಸೇನೆಯ ಸುಧಾರಿತ ಲಘು ಹೆಲಿಕಾಪ್ಟರ್ (ALH) ಬೆಳಿಗ್ಗೆ 10.43 ಕ್ಕೆ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಸೇನೆಯ ಪ್ರಕಾರ, ಕಂಡುಬಂದ ಮೂರರಲ್ಲಿ ಎರಡು ಮೃತ ದೇಹಗಳು ಪತ್ತೆಯಾಗಿದ್ದು, ಮೂರನೇ ದೇಹಕ್ಕಾಗಿ ಹುಡುಕಾಟ ನಡೆಯುತ್ತಿವೆ” ಎಂದು ಸೇನೆ ತಿಳಿಸಿದೆ.
ಅಪಘಾತದ ಸ್ಥಳವು ರಸ್ತೆ ಮೂಲಕ ಸಂಪರ್ಕ ಹೊಂದಿಲ್ಲ ಮತ್ತು ರಕ್ಷಣಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಈ ಹಿಂದೆ ಸೇನಾ ಮೂಲಗಳು ತಿಳಿಸಿವೆ.