ಫಿರೋಜಾಬಾದ್(ಉತ್ತರ ಪ್ರದೇಶ): ಹೆರಿಗೆ ನೋವು ಕಾಣಿಸಿಕೊಂಡ ಎಚ್ಐವಿ ಸೋಂಕಿತ ಮಹಿಳೆಯೊಬ್ಬರನ್ನು ಪರೀಕ್ಷಿಸಲು ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆ ವೈದ್ಯರು ನಿರಾಕರಿಸಿದ್ದು, ಹೆರಿಗೆಯಾದ ಕೆಲವೇ ಕ್ಷಣಗಳಲ್ಲಿ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಎಚ್ಐವಿ ಸೋಂಕಿತ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸರ್ಕಾರಿ ಆಸ್ಪತ್ರೆಯ ವೈದ್ಯರು ಆಕೆಯನ್ನು ಪರೀಕ್ಷಿಸದೇ ಹಲವಾರು ಗಂಟೆಗಳ ಕಾಲ ಕಾಯಿಸಿದ್ದಾರೆ. ಆಸ್ಪತ್ರೆಯ ಮುಖ್ಯಸ್ಥರ ಮಧ್ಯಸ್ಥಿಕೆಯ ನಂತರವೇ ಫಿರೋಜಾಬಾದ್ನ ಆಸ್ಪತ್ರೆಯ ವೈದ್ಯರು ಮಹಿಳೆಗೆ ಹೆರಿಗೆ ಮಾಡಿದ್ದಾರೆ. ಮಗು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಸೋಮವಾರ ಮಧ್ಯಾಹ್ನ 20 ವರ್ಷದ ಮಹಿಳೆಯನ್ನು ಆಕೆಯ ಪೋಷಕರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆತಂದಿದ್ದಾರೆ. ಮೊದಲು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ 20,000 ರೂ. ನೀಡುವಂತೆ ಬೇಡಿಕೆ ಇಟ್ಟರು. ನನ್ನ ಬಳಿ ಹಣವಿರಲಿಲ್ಲ. ಹೀಗಾಗಿ, ಈ ಸರ್ಕಾರಿ ಆಸ್ಪತ್ರೆಗೆ ಕರೆತಂದೆವು. ಆದ್ರೆ, ಅವರು ನನ್ನ ಮಗಳನ್ನು ಮುಟ್ಟಲು ಹಿಂಜರಿಯುತ್ತಿದ್ದರು. ನಂತ್ರ ನಾನು, ಆಸ್ಪತ್ರೆಯ ಉಸ್ತುವಾರಿಯನ್ನು ಕರೆದಾಗ ಅವರು ಮಧ್ಯಪ್ರವೇಶಿಸಿ, ಹೆರಿಗೆಗೆ ವ್ಯವಸ್ಥೆ ಮಾಡಿಸಿದರು. ರಾತ್ರಿ 9.30 ಕ್ಕೆ ಆಪರೇಷನ್ ಮಾಡಲಾಯಿತು. ಆದ್ರೆ. ಹೆರಿಗೆಯಾದ ನಂತ್ರ ಮಗು ಸಾವನ್ನಪ್ಪಿದೆ ಎಂದು ಮಹಿಳೆಯ ತಂದೆ ಆರೋಪಿಸಿದ್ದಾರೆ.
BIGG NEWS: ಚಿಲುಮೆ ಕೇಸ್ನಲ್ಲಿ ಜಟಾಪಟಿ: ಕಾಂಗ್ರೆಸ್ಗೂ ಮುನ್ನವೇ ಬಿಜೆಪಿ ದೂರು
SHOCKING : ಮಂಗಳೂರು ಸ್ಪೋಟ ಪ್ರಕರಣ : ‘ವಿಡಿಯೋ’ ನೋಡಿ ಬಾಂಬ್ ತಯಾರಿಕೆ ಕಲಿತ ಆರೋಪಿ