ಉತ್ತರ ಪ್ರದೇಶ: ಉತ್ತರ ಪ್ರದೇಶದ ನಾಗ್ಲಾ ಶಿಶಮ್ ಗ್ರಾಮದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮೈನ್ಪುರಿ ಕಮಲೇಶ್ ದೀಕ್ಷಿತ್ ಬುಧವಾರ ಹೇಳಿದ್ದಾರೆ.
“ನಾಗ್ಲಾ ಶಿಶಮ್ ಗ್ರಾಮದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಶೀಘ್ರದಲ್ಲೇ ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದರು.
ಸಂತ್ರಸ್ತೆಯ ಶವ ಅನುಮಾನಾಸ್ಪದವಾಗಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಸಂತ್ರಸ್ತೆಯ ತಂದೆ ಕೆಲಸದ ನಿಮಿತ್ತ ಮೈನ್ಪುರಿಗೆ ಹೋಗಿದ್ದರೆ, ತಾಯಿ ಆಗ್ರಾಕ್ಕೆ ಹೋಗಿದ್ದರು. ಇನ್ನೂ, ಬಾಲಕಿಯ ಕಿರಿಯ ಸಹೋದರಿ ಕೋಚಿಂಗ್ನಿಂದ ಹಿಂತಿರುಗಿದಾಗ ಎಷ್ಟೇ ಬಾಗಿಲು ಬಡಿದರೂ ಬಾಲಕಿ ಬಾಗಿಲು ತೆಗೆದಿಲ್ಲ. ನಂತ್ರ, ಮನೆಯ ಬಾಗಿಲಿನ ಕಿಟಕಿಯಿಂದ ನೋಡಿದಾಗ ಅಲ್ಲಿ ಸಹೋದರಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.
ಪೊಲೀಸರು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಆರೋಪಿ ಪುಷ್ಪೇಂದ್ರ ನನ್ನ ಸಹೋದರಿಯ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಸಂತ್ರಸ್ತೆಯ ಸಹೋದರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
BIGG NEWS: WhatsAppನಲ್ಲಿ ಸಂದೇಶಗಳ ಸ್ಕ್ರೀನ್ಶಾಟ್ ತೆಗೆಯುವ ವೈಶಿಷ್ಟ್ಯ ಶೀಘ್ರದಲ್ಲೇ ನಿರ್ಬಂಧ | WhatsApp