ಬೆಂಗಳೂರು: ಬೆಂಗಳೂರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಿದ್ದು, ನೆಲಮಂಗಲದ ಹೆಲಿಪ್ಯಾಡ್ನಲ್ಲಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಸ್ವಾಗತಿಸಿದರು.
BIGG NEWS: ಆಗಸ್ಟ್ ನಲ್ಲಿ GST ಸಂಗ್ರಹವು ₹ 1.43 ಲಕ್ಷ ಕೋಟಿ, 28% ಹೆಚ್ಚಳ
ನಗರದ ಹೊರವಲಯದಲ್ಲಿ ನಿರ್ಮಿಸಲಾಗಿರುವ ‘ಶ್ರೀ ಧರ್ಮಸ್ಥಳ ನಿಸರ್ಗ ಚಿಕಿತ್ಸೆ ಹಾಗೂ ಯೋಗ ಶಿಕ್ಷಣ ಸಂಸ್ಥೆ’ಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸಲಿದ್ದಾರೆ.
BIGG NEWS: ಆಗಸ್ಟ್ ನಲ್ಲಿ GST ಸಂಗ್ರಹವು ₹ 1.43 ಲಕ್ಷ ಕೋಟಿ, 28% ಹೆಚ್ಚಳ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಧರ್ಮಸ್ಥಳ ಶಿಕ್ಷಣ ಸಂಸ್ಥೆ ನೂತನವಾಗಿ ನಿರ್ಮಿಸಿರುವ, ಪ್ರಕೃತಿ ಚಿಕಿತ್ಸೆ ಕಲ್ಪಿಸುವ ‘ಕ್ಷೇಮವನ’ವನ್ನು ಸೆ.1ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಆಗಮಿಸುತ್ತಿದ್ದು, ಭಾರೀ ಭದ್ರತೆ ಕೈಗೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸಚಿವರಾದ ಡಾ.ಕೆ. ಸುಧಾಕರ್, ಆನಂದ ಸಿಂಗ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
BIGG NEWS: ಆಗಸ್ಟ್ ನಲ್ಲಿ GST ಸಂಗ್ರಹವು ₹ 1.43 ಲಕ್ಷ ಕೋಟಿ, 28% ಹೆಚ್ಚಳ
ತಾಲೂಕಿನ ಮಹದೇವಪುರ ಗ್ರಾಮದ ಸಮೀಪ 20 ಎಕರೆಯಲ್ಲಿ 93 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕ್ಷೇಮವನ ಬೆಂಗಳೂರು ಹಾಗೂ ಸುತ್ತಮುತ್ತಲ ಹತ್ತಾರು ಜಿಲ್ಲೆಯ ಜನರಿಗೆ ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಅನುಕೂಲವಾಗಲಿದೆ.