ಲಂಡನ್: ವಿಶ್ವದ ಅತಿದೊಡ್ಡ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದಿರುವ ಬ್ರಿಟನ್ ಅನ್ನು ಹಿಂದಿಕ್ಕಿ ಭಾರತ ಇದೀಗ ಆರ್ಥಿಕತೆಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ.
ಬ್ಲೂಮ್ಬರ್ಗ್ ಪ್ರಕಾರ, ವಿಶ್ವದ ಆರ್ಥಿಕತೆಯಲ್ಲಿ ಬ್ರಿಟನ್ ಅನ್ನು ಭಾರತ ಹಿಂದಿಕ್ಕಿ 5ನೇ ಸ್ಥಾನ ಪಡೆದುಕೊಂಡರೆ, ಬ್ರಿಟನ್ 6ನೇ ಸ್ಥಾನಕ್ಕೆ ಕುಸಿತಕಂಡಿದೆ ಎಂದು ವರದಿಯಾಗಿದೆ.
ಈ ಲೆಕ್ಕಾಚಾರವು US ಡಾಲರ್ಗಳನ್ನು ಆಧರಿಸಿದೆ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ GDP ಅಂಕಿಅಂಶಗಳ ಪ್ರಕಾರ, 2021ರ ಕೊನೆಯ ತ್ರೈಮಾಸಿಕ ವರದಿಯಲ್ಲಿ ಭಾರತವು ಬ್ರಿಟನ್ ಅನ್ನು ಹಿಂದಿಕ್ಕಿದೆ.
ಬ್ರಿಟನ್ನಲ್ಲಿ ಪ್ರಧಾನಿ ಹುದ್ದೆಗೆ ಚುನಾವಣೆ ಘೋಷಣೆಯಾಗಿರುವ ಕಾರಣ, ದೇಶವು ಅತಿ ಹೆಚ್ಚಿನ ಜೀವನ ವೆಚ್ಚವನ್ನು ಎದುರಿಸುತ್ತಿದೆ. ನಿನ್ನೆ ಬ್ರಿಟನ್ ಪ್ರಧಾನಿ ಆಯ್ಕೆಗೆ
ಚುನಾವಣೆಯ ಮತದಾನ ಅಂತ್ಯಗೊಂಡಿದ್ದು, ಸೆ. 5ಕ್ಕೆ ಮತ ಎಣಿಕೆ ನಡೆಯಲಿದೆ. ಅಂದು ಬ್ರಿಟನ್ನ ನೂತನ ಪ್ರಧಾನಿ ಯಾರು ಎಂದು ಅಂತಿಮವಾಗಲಿದೆ. ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಮತ್ತು ಮಾಜಿ ಚಾನ್ಸೆಲರ್ ರಿಷಿ ಸುನಕ್ ಪ್ರಧಾನಿ ಹುದ್ದೆಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
BIGG BREAKING NEWS : ಕೆಲವೇ ಕ್ಷಣಗಳಲ್ಲಿ ಚಿತ್ರದುರ್ಗದ ಡಿವೈಎಸ್ ಪಿ ಕಚೇರಿಯಲ್ಲಿ ಮುರುಘಾ ಶ್ರೀ ವಿಚಾರಣೆ
BREAKING NEWS: ಯುಪಿಯಲ್ಲಿ ವಲಸೆ ಕಾರ್ಮಿಕರಿದ್ದ ಬಸ್ಗೆ ಟ್ರಕ್ ಡಿಕ್ಕಿ: ನಾಲ್ವರ ದುರ್ಮರಣ, 24 ಮಂದಿಗೆ ಗಾಯ