ನವದೆಹಲಿ: 2002ರ ಗುಜರಾತ್ ದಂಗೆಯಲ್ಲಿ ಬಿಲ್ಕಿಸ್ ಬಾನೋ ಅವರ ಮೇಲೆ ಅತ್ಯಾಚಾರ ಎಸಗಿ ಅವರ ಕುಟುಂಬವನ್ನು ಕೊಂದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದ 11 ಮಂದಿಯನ್ನು ಶೀಘ್ರವಾಗಿ ಬಿಡುಗಡೆ ಮಾಡಿದ ಬಗ್ಗೆ , ಕೇಂದ್ರ ಸಚಿವರೊಬ್ಬರು ಇಂದು ರಾಜ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
“ಸರ್ಕಾರ ಮತ್ತು ಸಂಬಂಧಪಟ್ಟ ಜನರು ಈ ನಿರ್ಧಾರವನ್ನು ತೆಗೆದುಕೊಂಡಾಗ, ಇದು ಕಾನೂನಿನ ಪ್ರಕ್ರಿಯೆಯಾಗಿರುವುದರಿಂದ ಅದರಲ್ಲಿ ನನಗೆ ಯಾವುದೇ ತಪ್ಪಿಲ್ಲ ಅಂತ ಕಾಣಿಸಿಕೊಳ್ಳುತ್ತದೆ” ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಎನ್ಡಿಟಿವಿಗೆ ಜೊತೆಗಿನ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರಜೈಲಿನಲ್ಲಿ “ಸಾಕಷ್ಟು ಸಮಯ” ಕಳೆದ ಅಪರಾಧಿಗಳಿಗೆ, “ಬಿಡುಗಡೆಗೆ ಅವಕಾಶವಿದೆ” ಎಂದು ಸಚಿವರು ಹೇಳಿದರು.
ಈ ನಡುವೆ ‘ಸನ್ನಡತೆಗಾಗಿ ಕೈದಿಗಳನ್ನು ಬಿಡುಗಡೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಇದನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ನಾನು ನಂಬುತ್ತೇನೆ. ಖಂಡಿತವಾಗಿಯೂ, ಯಾವುದೇ ಅಪರಾಧಿಯು ಅವರ ಕೃತ್ಯಗಳಿಗಾಗಿ ಶಿಕ್ಷೆಗೆ ಅರ್ಹನಾಗಿದ್ದಾನೆ” ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.