ಬೆಂಗಳೂರು: ಕೋರ್ ಡಿಸ್ಕವರಿ ಯುವರ್ ಕೋರ್, ವನನಂ ಹಾಗೂ ಟೆನ್ ಥೌಸಂಡ್ ಎಕೋ ಸಿಸ್ಟಮ್ ಪಾರ್ಟರ್ ಸಂಸ್ಥೆಗಳ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ನಾಳೆ ರಾಷ್ಟ್ರಮಟ್ಟದ ನವೋದ್ಯಮಗಳನ್ನು ಒಳಗೊಂಡ ಶೃಂಗ ಸಭೆ (ಎಸ್.ಐ.ಎಸ್)ಯನ್ನು ಕೇಂದ್ರ ಹಣಕಾಸು ಹಾಗೂ ಸಾಂಸ್ಥಿಕ ವ್ಯವಹಾರಗಳ ಸಚಿವೆ ನಿರ್ಮಲ ಸೀತಾರಾಮನ್ ಉದ್ಘಾಟಿಸಲಿದ್ದಾರೆ.
ಹೊಟೇಲ್ ಕಾನ್ರಾಡ್ ನಲ್ಲಿ ಮಧ್ಯಾಹ್ನ 2 ಗಂಟೆಗೆ ಶೃಂಗ ಸಭೆಗೆ ಸಚಿವರು ಚಾಲನೆ ನೀಡಲಿದ್ದಾರೆ. ನವೋದ್ಯಮಗಳಲ್ಲಿ ಚಿಲ್ಲರೆ ವಲಯದ ಸಹಭಾಗಿತ್ವ, ಮಹಿಳೆಯರನ್ನೊಳಗೊಂಡ ನವೋದ್ಯಮಗಳು, ಭಾರತದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ನವೋದ್ಯಮಗಳಲ್ಲಿ ಹೂಡಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಶೃಂಗ ಸಭೆಯಲ್ಲಿ ಚರ್ಚೆ ನಡೆಯಲಿದೆ.