ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಆತಂಕ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಿಂದ 4 ಗಂಟೆಗೆ ಸುಮಾರಿಗೆ ಭದ್ರತಾ ಸಭೆ ನಡೆಯಲಿದೆ.
BREAKING NEWS: ಜಮ್ಮುವಿನಲ್ಲಿ ಭಯೋತ್ಪಾದಕರು-ಭದ್ರತಾ ಪಡೆಗಳ ನಡುವೆ ಎನ್ಕೌಂಟರ್: ಗ್ರೆನೇಡ್ ಸ್ಫೋಟ, ಗುಂಡಿನ ದಾಳಿ
ಸಿಎಸ್ಎಫ್, ಸಿಆರ್ಪಿಎಫ್, ಕಾಶ್ಮೀರ ಡಿಜಿಗಳ ಜೊತೆ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಬೆಳಗ್ಗೆಯಷ್ಟೇ 2-3ಉಗ್ರರನ್ನು ಸೇನಾಪಡೆ ಹೊಡೆದೊರುಳಿಸಿದೆ ಈ ಬಗ್ಗೆ ಹಚ್ಚಿನ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.
ಜಮ್ಮುವಿನ ಪಂಜ್ತಿರ್ತಿ-ಸಿದ್ರಾ ರಸ್ತೆಯಲ್ಲಿ ಬೆಳಿಗ್ಗೆ 7.30ಕ್ಕೆ ಭದ್ರತಾ ಪಡೆಗಳು ಮತ್ತು ಇಬ್ಬರು-ಮೂವರು ಭಯೋತ್ಪಾದಕರ ನಡುವೆ ಎನ್ಕೌಂಟರ್ ನಡೆದಿದ್ದು, ನಂತರ ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಯನ್ನು ರವಾನಿಸಲಾಗಿದೆ. ಗ್ರೆನೇಡ್ ಸ್ಫೋಟ ಸಂಭವಿಸಿದ ನಂತರ ಗುಂಡಿನ ಚಕಮಕಿ ನಡೆದಿದೆ
BREAKING NEWS: ಜಮ್ಮುವಿನಲ್ಲಿ ಭಯೋತ್ಪಾದಕರು-ಭದ್ರತಾ ಪಡೆಗಳ ನಡುವೆ ಎನ್ಕೌಂಟರ್: ಗ್ರೆನೇಡ್ ಸ್ಫೋಟ, ಗುಂಡಿನ ದಾಳಿ
ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ವಶಪಡಿಸಿಕೊಳ್ಳಲಾದ 15 ಕೆಜಿ ತೂಕದ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಪೊಲೀಸರು ಸೋಮವಾರ ನಿಷ್ಕ್ರಿಯಗೊಳಿಸಿದ ನಂತರ ಈ ಎನ್ಕೌಂಟರ್ ನಡೆದಿದೆ.
J&K | Encounter underway in Sidhra area of Jammu, firing going on, two terrorists likely on the spot: Jammu and Kashmir police pic.twitter.com/R4JCATGM65
— ANI (@ANI) December 28, 2022
ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ನ ಒಂದು ಕೋಡೆಡ್ ಶೀಟ್ ಮತ್ತು ಒಂದು ಲೆಟರ್ ಪ್ಯಾಡ್ ಪುಟವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಬಸಂತ್ಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ನಿಟ್ಟಿನ ಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಿಂದ 4 ಗಂಟೆಗೆ ಸುಮಾರಿಗೆ ಭದ್ರತಾ ಸಭೆ ನಡೆಸಲು ಮುಂದಾಗಿದ್ದಾರೆ
BREAKING NEWS: ಜಮ್ಮುವಿನಲ್ಲಿ ಭಯೋತ್ಪಾದಕರು-ಭದ್ರತಾ ಪಡೆಗಳ ನಡುವೆ ಎನ್ಕೌಂಟರ್: ಗ್ರೆನೇಡ್ ಸ್ಫೋಟ, ಗುಂಡಿನ ದಾಳಿ