ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ( Union Home Minister Amith Shash ) ಅವರ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಡಿಸೆಂಬರ್ 14 ಅಥವಾ 15 ರಂದು ಸಭೆ ನಡೆಯಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು.
BIGG NEWS : ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ರಾಗಿ ಖರೀದಿ ಡಿಸೆಂಬರ್ 15 ರಿಂದ ನೋಂದಣಿ
ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸೋಮವಾರದಂದು ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದೆ. ನಾನೂ ಕೂಡ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಅವರು ಹೇಳಿ ಕಳಿಸಿದಾಗ ಬರಬೇಕಾಗುವುದು ಎಂದು ಹೇಳಿದ್ದಾರೆ. ಕರ್ನಾಟಕದ ವಿಚಾರ, ನಿಲುವು, ವಾಸ್ತವಾಂಶವನ್ನು ಈಗಾಗಲೇ ತಿಳಿಸಲಾಗಿದೆ. ಹಲವಾರು ವಿವರಗಳನ್ನು ಸಹ ನೀಡಲಾಗಿದೆ. ಭೇಟಿಯಾದ ಸಂದರ್ಭದಲ್ಲಿ ಕರ್ನಾಟಕದ ನಿಲುವನ್ನು ಅವರಿಗೆ ಸ್ಪಷ್ಟಪಡಿಸಲಾಗುವುದು ಎಂದರು.
BIGG NEWS: ಮಂಗಳೂರಿನಲ್ಲಿ ಕೊರಗಜ್ಜನ ಆದಿಸ್ಥಳಕ್ಕೆ ಕುಟುಂಬ ಸಮೇತ ಶಿವರಾಜ್ ಕುಮಾರ್ ಭೇಟಿ
ಸರ್ವ ಪಕ್ಷದ ಸಭೆ
ಸರ್ವ ಪಕ್ಷದ ಸಭೆ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ( Siddaramaiah ) ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( Farmer CM HD Kumaraswamy ) ಅವರೊಂದಿಗೆ ಮಾತನಾಡಲಾಗಿದೆ. ಸಭೆ ನಿಗದಿಯಾದ ಕೂಡಲೇ ತಿಳಿಸಲಾಗುವುದು ಎಂದರು.
BIGG NEWS : ಅಪಘಾತದ ಕೇಸ್ ನಲ್ಲಿ ಜಪ್ತಿಯಾದ ವಾಹನಗಳು 24 ಗಂಟೆಯೊಳಗೆ ಮಾಲೀಕರಿಗೆ ಹಸ್ತಾಂತರ!