ನವದೆಹಲಿ : ಅಕ್ಟೋಬರ್ ತಿಂಗಳಲ್ಲಿ ದೇಶಾದ್ಯಂತ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದು ಭಾರತೀಯ ಆರ್ಥಿಕತೆ ಮೇಲ್ವಿಚಾರಣಾ ಕೇಂದ್ರ (ಸಿಎಂಐಇ) ನೀಡಿರುವ ವರದಿಯಲ್ಲಿ ಕಂಡ ಅಂಶ. ಅಕ್ಟೋಬರ್ನಲ್ಲಿ ನಿರುದ್ಯೋಗ ದರ ಶೇ. 7.77ಕ್ಕೆ ಹೆಚ್ಚಾಗಿದೆ. ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಪರಿಣಾಮವಾಗಿದೆ.
BIG NEWS: ಇಂದಿನಿಂದಲೇ ʻಟ್ವಿಟರ್ʼ ಉದ್ಯೋಗಿಗಳ ಸಾಮೂಹಿಕ ವಜಾ ಪ್ರಾರಂಭ | mass layoffs at Twitter
ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ನಿರುದ್ಯೋಗ ದರ ಶೇ. 6.43ಕ್ಕೆ ಇಳಿದಿತ್ತು. ಕಳೆದ 4 ವರ್ಷದಲ್ಲೇ ಅದು ಅತೀ ಕಡಿಮೆ ನಿರುದ್ಯೋಗ ಮಟ್ಟವೆನಿಸಿತ್ತು. ಅಕ್ಟೋಬರ್ ತಿಂಗಳಲ್ಲಿ ಏಕಾಏಕಿ 1.34 ಪರ್ಸಂಟೇಜ್ ಪಾಯಿಂಟ್ಗಳಷ್ಟು ಏಕಾಏಕಿ ಹೆಚ್ಚಾಗಿ ನಿರುದ್ಯೋಗ ದರ ಶೇ. 7.77 ತಲುಪಿದೆ.
ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿ ಉದ್ಯೋಗನಷ್ಟ ಬಹಳ ಹೆಚ್ಚಿದೆ. ನಗರ ಪ್ರದೇಶದಲ್ಲಿ ಸೆಪ್ಟೆಂಬರ್ನಲ್ಲಿ ಶೇ. 7.21ರಷ್ಟಿದ್ದ ನಿರುದ್ಯೋಗ ಅಕ್ಟೋಬರ್ನಲ್ಲಿ ಶೇ. 7.7ಕ್ಕೆ ಹೆಚ್ಚಿದೆ. ಆದರೆ, ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ದರ ಒಂದೇ ತಿಂಗಳಲ್ಲಿ ಶೇ. 5.84ರಿಂದ ಶೇ. 8.04ಕ್ಕೆ ಜಿಗಿತ ಕಂಡಿದೆ
BIG NEWS: ಇಂದಿನಿಂದಲೇ ʻಟ್ವಿಟರ್ʼ ಉದ್ಯೋಗಿಗಳ ಸಾಮೂಹಿಕ ವಜಾ ಪ್ರಾರಂಭ | mass layoffs at Twitter
ಉದ್ಯೋಗನಷ್ಟಕ್ಕೆ ಕಾರಣವೇನು? ಮುಂಗಾರಿನ ಆರಂಭದಲ್ಲಿ ಬಿತ್ತನೆ ಮಾಡಿದ ಬೆಳೆಗಳು ಸಾಮಾನ್ಯವಾಗಿ ಸೆಪ್ಟೆಂಬರ್ನಿಂದ ಆರಂಭವಾಗಿ ಅಕ್ಟೋಬರ್ ತಿಂಗಳ ಮೊದಲಾರ್ಧದವರೆಗೂ ಕಟಾವಿಗೆ ಬರುತ್ತವೆ. ಈ ಕಾರಣಕ್ಕೆ ಅಕ್ಟೋಬರ್ ತಿಂಗಳಲ್ಲಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಪ್ರಮಾಣ ಕಡಿಮೆಯಾಗಿರಬಹುದು ಎಂಬುದು ತರ್ಕ. ಈ ತಿಂಗಳು, ನವೆಂಬರ್ನಲ್ಲಿ ಹೊಸ ಬಿತ್ತನೆ ಶರುವಾಗುತ್ತದೆ. ಆಗ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ದರ ಮತ್ತೆ ಇಳಿಕೆ ಕಾಣುತ್ತದೆ. ಕಳೆದ ವರ್ಷವೂ ಇದೇ ಟ್ರೆಂಡ್ ಇತ್ತು. 2021 ಅಕ್ಟೋಬರ್ ತಿಂಗಳಲ್ಲಿ ಗ್ರಾಮೀಣ ಭಾಗದಲ್ಲಿ ಶೇ. 7.91ರಷ್ಟಿದ್ದ ನಿರುದ್ಯೋಗ ದರ ನವೆಂಬರ್ ತಿಂಗಳಲ್ಲಿ ಶೇ. 6.41ಕ್ಕೆ ಇಳಿದುಹೋಗಿತ್ತು. ಈ ಬಾರಿಯೂ ಅದೇ ನಿರೀಕ್ಷೆ ಇದೆ.
BIG NEWS: ಇಂದಿನಿಂದಲೇ ʻಟ್ವಿಟರ್ʼ ಉದ್ಯೋಗಿಗಳ ಸಾಮೂಹಿಕ ವಜಾ ಪ್ರಾರಂಭ | mass layoffs at Twitter
ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್
ಅನೇಕ ಐಟಿ ಕಂಪನಿಗಳು ಮತ್ತು ವಿಶ್ವದ ಕೆಲ ಪ್ರಮುಖ ಕಂಪನಿಗಳು ಆರ್ಥಿಕ ಮುಗ್ಗಟ್ಟು ಎದುರಿಸಲು ಉದ್ಯೋಗ ಕಡಿತಕ್ಕೆ ಕೈಹಾಕಿರುವ ಸುದ್ದಿ ಕೇಳಿದ್ದೇವೆ. ಆದರೆ, ಭಾರತದಲ್ಲಿ ತಯಾರಕಾ ವಲಯದಲ್ಲಿ ಮುಂದಿನ ದಿನಗಳಲ್ಲಿ ಬಹಳಷ್ಟು ಉದ್ಯೋಗಸೃಷ್ಟಿಯಾಗುವ ನಿರೀಕ್ಷೆ ಇದೆ. ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಶೇ. 57ರಷ್ಟು ಕಂಪನಿಗಳು ಉದ್ಯೋಗ ಭರ್ತಿ ಮಾಡುತ್ತಿವೆ ಎಂದು ಮತ್ತೊಂದು ವರದಿ ಹೇಳಿದೆ.
BIG NEWS: ಇಂದಿನಿಂದಲೇ ʻಟ್ವಿಟರ್ʼ ಉದ್ಯೋಗಿಗಳ ಸಾಮೂಹಿಕ ವಜಾ ಪ್ರಾರಂಭ | mass layoffs at Twitter
ಮ್ಯಾನುಫ್ಯಾಕ್ಚರಿಂಗ್ ಮತ್ತು ಸರ್ವಿಸ್ ಸೆಕ್ಟರ್ಗಳೆರಡೂ ಸೇರಿ ಕಂಪನಿಗಳು ಉದ್ಯೋಗಭರ್ತಿಗೆ ತೋರುತ್ತಿರುವ ಉತ್ಸಾಹ ದಿನೇದಿನೇ ಹೆಚ್ಚುತ್ತಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಎಸ್ ಅಂಡ್ ಪಿ ಪಿಎಂಐ ಸೂಚಿ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಉದ್ಯೋಗಸೃಷ್ಟಿ ಭರದಿಂದ ನಡೆದಿದೆ. ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ವೇಗದಲ್ಲಿ ಅಕ್ಟೋಬರ್ನಲ್ಲಿ ಉದ್ಯೋಗಭರ್ತಿಯಾಗಿದೆ. ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ನಲ್ಲಿ ಬೇಡಿಕೆ ಹೆಚ್ಚುತ್ತಿರುವುದು ಆ ವಲಯದ ಕಂಪನಿಗಳು ಹೊಸ ಉತ್ಸಾಹ ಪಡೆದಿವೆ.
BIG NEWS: ಇಂದಿನಿಂದಲೇ ʻಟ್ವಿಟರ್ʼ ಉದ್ಯೋಗಿಗಳ ಸಾಮೂಹಿಕ ವಜಾ ಪ್ರಾರಂಭ | mass layoffs at Twitter
ಇಪಿಎಫ್ಒ ದತ್ತಾಂಶವೂ ಇದೇ ಹೇಳುತ್ತೆ?
ಭಾರತದಲ್ಲಿ ಕೆಲ ವಲಯಗಳಲ್ಲಿ ಉದ್ಯೋಗಸೃಷ್ಟಿ ಹೆಚ್ಚಾಗಿದೆ ಎನ್ನುವುದಕ್ಕೆ ಪೂರಕವಾಗಿ ಇಪಿಎಫ್ಒದ ದತ್ತಾಂಶ ಇದೆ. ಆಗಸ್ಟ್ ತಿಂಗಳಲ್ಲಿ ಇಪಿಎಫ್ಒಗೆ 16.9 ಲಕ್ಷ ಹೊಸ ಸದಸ್ಯರು ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಹೊಸ ಇಪಿಎಫ್ಒ ಸದಸ್ಯರ ಸಂಖ್ಯೆ ಶೇ. 14.4ರಷ್ಟು ಏರಿದೆ. ಆಗಸ್ಟ್ ತಿಂಗಳಲ್ಲಿ ಸೇರ್ಪಡೆಯಾದ 16.9 ಲಕ್ಷ ಇಪಿಎಫ್ಒ ಸಬ್ಸ್ಕ್ರೈಬರ್ಸ್ ಪೈಕಿ 99 ಸಾವಿರದ್ಟು ಜನರು ಇಪಿಎಫ್ಒ ಖಾತೆ ಆರಂಭಿಸಿದ್ದು ಇದೇ ಮೊದಲು. ಅವರ ಪೈಕಿ ಶೇ. 58.32ರಷ್ಟು ಜನರು 18ರಿಂದ 25 ವರ್ಷ ವಯೋಮಾನದವರಾಗಿದ್ದಾರೆ.
BIG NEWS: ಇಂದಿನಿಂದಲೇ ʻಟ್ವಿಟರ್ʼ ಉದ್ಯೋಗಿಗಳ ಸಾಮೂಹಿಕ ವಜಾ ಪ್ರಾರಂಭ | mass layoffs at Twitter
ಅಂದರೆ ಬಹುತೇಕ ಹೊಸ ಉದ್ಯೋಗಿಗಳಾಗಿದ್ದಾರೆ. ಇದೇ ವೇಳೆ, ಅಮೆರಿಕದಲ್ಲಿ ನಿರುದ್ಯೋಗ ದರ ಶೇ. 3.5ರ ಆಸುಪಾಸಿನಲ್ಲಿದೆ. ಅಲ್ಲೀಗ ಹಣದುಬ್ಬರದ ಜೊತೆ ನಿರುದ್ಯೋಗ ವಿಚಾರ ಬಹಳ ಪ್ರಾಮುಖ್ಯತೆ ಪಡೆದಿದೆ. ಹಣದುಬ್ಬರ ಮತ್ತು ನಿರುದ್ಯೋಗ ಎರಡನ್ನೂ ನಿಯಂತ್ರಣಕ್ಕೆ ತರುವ ಸಕಲ ಪ್ರಯತ್ನಗಳನ್ನೂ ಅಲ್ಲಿ ಮಾಡಲಾಗುತ್ತಿದೆ. ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಹಣದುಬ್ಬರ ತುಸು ಕಡಿಮೆ. ಆದರೆ, ನಿರುದ್ಯೋಗ ಹೆಚ್ಚೇ ಇದೆ. ಚೀನಾದಲ್ಲಿ ನಿರುದ್ಯೋಗ ದರ ಶೇ. 4ರ ಆಸುಪಾಸಿನಲ್ಲಿದೆ. ಪಾಕಿಸ್ತಾನದಲ್ಲೂ ನಿರುದ್ಯೋಗ ದರ ಭಾರತಕ್ಕಿಂತ ಕಡಿಮೆ ಇರುವುದು ಕೆಲ ವರದಿಗಳು ಹೇಳುತ್ತವೆ.
BIG NEWS: ಇಂದಿನಿಂದಲೇ ʻಟ್ವಿಟರ್ʼ ಉದ್ಯೋಗಿಗಳ ಸಾಮೂಹಿಕ ವಜಾ ಪ್ರಾರಂಭ | mass layoffs at Twitter