ಬೆಂಗಳೂರು : 1 ವರ್ಷದ ಪುಟ್ಟ ಮಗುವಿನ ಸಲಿಂಗ ದೌರ್ಜನ್ಯ ನಡೆಸಿ ಮಗುವನ್ನು ಕೊಲೆ ಮಾಡಿದ ಆರೋಪಿಗೆ ಕೋರ್ಟ್ ಮರಣದಂಡನೆ ಶಿಕ್ಷೆ ನೀಡಿ ಆದೇಶಿಸಿದೆ.
2015 ರ ಸೆಪ್ಟೆಂಬರ್ 12 ರಂದು ಇಂತಹ ಹೇಯ ಕೃತ್ಯ ನಡೆದಿದ್ದು, ಮೂರ್ತಿ ಅಲಿಯಾಸ್ ಹಲ್ಲುಜ್ಜ ಎಂಬಾತ 18 ವರ್ಷ ವಯಸ್ಸಿನಲ್ಲಿರುವಾಗ 1 ವರ್ಷದ ಪುಟ್ಟ ಮಗುವಿನ ಸಲಿಂಗ ದೌರ್ಜನ್ಯ ನಡೆಸಿ ಮಗುವಿನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ಇದೀಗ ಈ ಕುರಿತು ವಿಚಾರಣೆ ನಡೆಸಿದ ಬೆಂಗಳೂರು ಎಫ್ ಟಿ ಎಸ್ ಸಿ 1 ರ ನ್ಯಾಯಾಧೀಶೆ ಕೆ ಎನ್ ರೂಪ ಈ ತೀರ್ಪು ನೀಡಿದ್ದಾರೆ.
ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಜೊತೆಗೆ ಮಗುವಿನ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ನೀಡಲು ಆದೇಶ ಹೊರಡಿಸಿದ್ದಾರೆ.
ಪ್ರಕರಣ ಸಂಬಂಧ ಇತ್ತೀಚೆಗೆ ಈತನಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ನಂತರ ಆತನಿಗೆ ಮರಣದಂಡನೆ ಶಿಕ್ಷೆಯೇ ನೀಡಬೇಕು ಎಂದು ಅರ್ಜಿ ಬಂದ ಹಿನ್ನೆಲೆ ಕೋರ್ಟ್ ಆದೇಶ ಹೊರಡಿಸಿದೆ.
ವಾಹನ ಸವಾರರೇ ಎಚ್ಚರ ; ನೀವು ಈ ತಪ್ಪುಗಳನ್ನ ಮಾಡಿದ್ರೆ ₹40,000 ದಂಡ ಪಾವತಿಸ್ಬೇಕಾಗುತ್ತೆ