ಉಡುಪಿ : ಹೃದಯಾಘಾತದಿಂದ ವಿಚಾರಣಾಧೀನ ಕೈದಿಯೊಬ್ಬ ಸಾವನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕ ಸಬ್ ಜೈಲಿನಲ್ಲಿ ನಡೆದಿದೆ.
ಮೃತ ಕೈದಿಯನ್ನು ಅನುಪ ಶೆಟ್ಟಿ (38) ಎಂದು ಹೇಳಲಾಗುತ್ತಿದೆ. ಫೈನಾನ್ಸಿಯರ್ ಅಜೇಂದ್ರ ಶೆಟ್ಟಿ ಕೊಲೆ ಕೇಸಿನಲ್ಲಿ ಕಳೆದ ಎರಡು ವರ್ಷಗಳಿಂದ ಅನೂಪ್ ಜೈಲಿನಲ್ಲಿದ್ದ. ಸಂಜೆ ವೇಳೆಗೆ ಕೈದಿ ಅನುಪ ಶೆಟ್ಟಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅನುಪಶೆಟ್ಟಿ ಸಾವನ್ನಪ್ಪಿದ್ದಾನೆ.
ಮೊಸಳೆಗೆ ವೃದ್ಧ ಬಲಿ
ದೂದಗಂಗಾ ನದಿಯಲ್ಲಿ ಈಜಲು ತೆರಳಿದ್ದ ವೃದ್ಧರೊಬ್ಬರು ಮೊಸಳೆಗೆ ಬಲಿಯಾಗಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗ ಬಳಿ ಈ ಘಟನೆ ನಡೆದಿದೆ. ನಿನ್ನೆ ನದಿಗೆ ಈಜಲು ಇಳಿದಿದ್ದ ಮಹಾದೇವ ಕುರೆ (72) ಮೃತ ವೃದ್ಧರು ಎಂದು ತಿಳಿದುಬಂದಿದೆ.
ಸಿಡಿಲಿಗೆ ರೈತ ಬಲಿ
ಹಿರೇಮುಕರ್ತಿನನಾಳ ಗ್ರಾಮದಲ್ಲಿ ರೈತನ್ನೊಬ್ಬ ಸಿಡಿಲಿಗೆ ಸಾವನ್ನಪ್ಪಿದ್ದಾನೆ. ಸಿಡಿಲು ಬಡಿದು ರೈತ ಕನಕಪ್ಪ ಕಾಟಾಪುರ (22) ಸಾವನ್ನಪ್ಪಿದ್ದಾನೆ. ಹೊಲದಲ್ಲಿ ಕೆಲಸ ಮಾಡುವಾಗ ಕನಕಪ್ಪನಿಗೆ ಸಿಡಿಲು ಬಡಿದಿದೆ. ಘಟನೆ ಕುರಿತಂತೆ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.