ಉಡುಪಿ : ಸೈಬರ್ 1 ಜಾಗರೂ ಪಿಎಚ್ಡಿ ವಿದ್ಯಾರ್ಥಿಯನ್ನು ಗುರಿಯಾಗಿಸಿಕೊಂಡು ವಾಟ್ಸಪ್ ಸಂದೇಶವನ್ನು ಕಳಿಸಿದ್ದಾರೆ ಈ ಒಂದು ವಾಟ್ಸಾಪ್ ಸಂದೇಶದಿಂದ ಹಂತ ಹಂತವಾಗಿ ಪಿಎಸಡಿ ವಿದ್ಯಾರ್ಥಿನಿಯೊಬ್ಬರು 2 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಹೌದು ಗಿಟಿಕಾ ಬಸಿನ್ ಎಂಬಾಕೆ ಹಣ ಕಳೆದುಕೊಂಡವರು. ಮಣಿಪಾಲದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡಿಕೊಂಡಿರುವ ಇವರು ಜೂನ್ 23ರಂದು ತನ್ನ ಕೊಠಡಿಯಲ್ಲಿರುವಾಗ Review Job & Pre Paid Tasks ಎಂಬ ಸಂದೇಶವನ್ನು ವಾಟ್ಸ್ಆ್ಯಪ್ನಲ್ಲಿ ಸ್ವೀಕರಿಸಿದ್ದರು. ಇವನ ಸಂದೇಶದ ಪ್ರಕಾರ ವಂಚಕರು ನೀಡಿರುವಂತಹ ಟಾಸ್ಕ್ ಗಳನ್ನು ಹಂತಹಂತವಾಗಿ ಪೂರ್ಣಗೊಳಿಸಿದ್ದಾರೆ.
ನಂತರ ಅಪರಿಚಿತ ವ್ಯಕ್ತಿ ಯುವತಿಯ ಟೆಲಿಗ್ರಾಂ ಆ್ಯಪ್ಗೆ Linkdin idea 2024 Jrlul 827pd ಎಂಬ ಲಿಂಕ್ ಕಳುಹಿಸಿ ಸೇರುವಂತೆ ತಿಳಿಸಿದ್ದಾನೆ.ಈ ಗ್ರೂಪ್‌ಗೆ ಸೇರ್ಪಡೆಯಾದ ಬಳಿಕ Pre Paid Tasksನಲ್ಲಿ ಹೂಡಿಕೆ ಮಾಡುವಂತೆ ತಿಳಿಸಲಾಗಿದೆ. ನಂತರ ಆಕೆ 4,600 ರೂ. ಹೂಡಿಕೆ ಮಾಡಿದ್ದು, ಖಾತೆಗೆ 5,850 ರೂ. ಜಮೆ ಮಾಡುವ ಮೂಲಕ ವಂಚಕರು ಯುವತಿಯನ್ನು ಮೋಸದ ಬಲೆಗೆ ಬೀಳಿಸಿದ್ದಾರೆ.
ಇದರಿಂದ ಹೂಡಿಕೆ ಮಾಡಿರುವ ಹಣ ಡಬಲ್ ಆಗುತ್ತದೆ ಎಂದು ಹಣದ ಆಸೆಗೆ ಬಿದ್ದ ಯುವತಿ ಅಪರಿಚಿತರ ಸೂಚನೆಯ ಮೇರೆಗೆ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ಒಟ್ಟು 2,20,100 ರೂ.ಗಳನ್ನು ಅಪರಿಚಿತರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು.ಇದಾದ ಬಳಿಕ ವಂಚಕರು ಹಣ ಮರಳಿಸದೆ ವಂಚಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮೋಸ ಹೋದ ಯುವತಿ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.