ಉಡುಪಿ: ಟೋಲ್ ಬಳಿಯ ರಸ್ತೆಯಲ್ಲಿಯೇ ಮಲಗಿದ್ದಂತ ಧನವನ್ನು ಓಡಿಸಲು ಹೋಗಿದ್ದಂತ ಟೋಲ್ ಸಿಬ್ಬಂದಿಯನ್ನು ರಕ್ಷಿಸಲು ಹೋಗಿ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಗೆ ಡಿಕ್ಕಿಯಾದ ಪರಿಣಾಮ, ಆ್ಯಂಬುಲೆನ್ಸ್ ನಲ್ಲಿದ್ದಂತ ರೋಗಿ, ರೋಗಿಯ ಪತ್ನಿ ಸಹಿತ ಮೂವರು ಸಾವನ್ನಪ್ಪಿದ್ದರು. ಈ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಸಂಬಂಧಿ ಇದೀಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ ಟೋಲ್ ಗೆ ಆ್ಯಂಬುಲೆನ್ಸ್ ಡಿಕ್ಕಿಯಾಗಿ ನಡೆದಂತ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಶಿವಮೊಗ್ಗ: ಜು.24ರಿಂದ ತಾಳಗುಪ್ಪ- ಮೈಸೂರು ಪ್ಯಾಸೆಂಜರ್ ರೈಲು ಸಂಚಾರ ಪುನಾರಂಭ
ಹೊನ್ನಾವರದಿಂದ ಕುಂದಾಪುರಕ್ಕೆ ಆ್ಯಂಬುಲೆನ್ಸ್ ನಲ್ಲಿ ರೋಗಿಯಾಗಿದ್ದಂತ ಲೋಕೇಶ ಮಾಧವ ನಾಯ್ಕ್ ಎಂಬುವರನ್ನು ಶ್ರೀದೇವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆ್ಯಂಬುಲೆನ್ಸ್ ಮೂಲಕ ಕರೆದೊಯ್ಯಲಾಗುತ್ತಿತ್ತು. ಬೈದೂರು ತಾಲೂಕಿನ ಶಿರೂರು ಟೋಲ್ ಗೇಟ್ ಬಳಿಯಲ್ಲಿ ಬಂದಾಗ, ಟೋಲ್ ಸಿಬ್ಬಂದಿಗಳು ಆ್ಯಂಬುಲೆನ್ಸ್ ಬಂದಿದ್ದನ್ನು ಗಮನಿಸಿ ರಸ್ತೆಗೆ ಅಡ್ಡವಾಗಿಟ್ಟಿದ್ದಂತ ಬ್ಯಾರಿಗೇಡ್ ತೆಗೆದಿದ್ದಾರೆ. ಮತ್ತೊಬ್ಬ ಸಿಬ್ಬಂದಿ ಅದೇ ರಸ್ತೆಯಲ್ಲಿ ಮಲಗಿದ್ದಂತ ಧನವನ್ನು ಓಡಿಸಿದ್ದಾರೆ.
ಟೋಲ್ ಸಿಬ್ಬಂದಿ ಬ್ಯಾರಿಗೇಡ್, ಧನ ಓಡಿಸುತ್ತಿದ್ದನ್ನು ಕಂಡಂತ ಆ್ಯಂಬುಲೆನ್ಸ್ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ಟೋಲ್ ಗೆ ಡಿಕ್ಕಿ ಹೊಡೆದಿದ್ದಾನೆ. ಈ ಪರಿಣಾಮವಾಗಿ ಆ್ಯಂಬುಲೆನ್ಸ್ ಡೋರ್ ಓಪನ್ ಆಗಿ ರೋಗಿ ಲೋಕೇಶ್ ಮಾಧವ ನಾಯ್ಕ್ ಸ್ಟ್ರೆಚರ್ ನಿಂದ ಕೆಳಗೆ ಬಿದ್ದರೇ, ಅದರಲ್ಲಿದ್ದಂತ ಲೋಕೇಶ್ ಪತ್ನಿ ಜ್ಯೋತಿ, ಸಂಬಂಧಿಕರಾದಂತ ಗಜಾನನ ನಾಯಕ್ ಸೇರಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಇನ್ನೂ ಈ ಆ್ಯಂಬುಲೆನ್ಸ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಂತ ರೋಗಿ ಲೋಕೇಶ್ ಮಾಧವ ನಾಯ್ಕ್ ಸಂಬಂಧಿ ಮಂಜುನಾಥ ನಾಯಕ್ ಅನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಿಸದೇ ಸಾವನನ್ನಪ್ಪಿರೋದಾಗಿ ತಿಳಿದು ಬಂದಿದೆ. ಈ ಮೂಲಕ ಆ್ಯಂಬುಲೆನ್ಸ್ ಡಿಕ್ಕಿಯಾಗಿ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆಯಾದಂತೆ ಆಗಿದೆ.