ಉತ್ತರಕನ್ನಡ : ಮನೆಯಲ್ಲಿ ಮಗುವಿಗೆ ಆಟದ ನೆಪದಲ್ಲಿ ಮನೆಯಲ್ಲಿದ್ದ ಸಿಕ್ಕ ಸಿಕ್ಕ ವಸ್ತುಗಳನ್ನು ಮಕ್ಕಳ ಕೈಗೆ ಕೊಡಬೇಡಿ. ಅದರಿಂದ ಕ್ಷಣಮಾತ್ರದಲ್ಲಿ ಜೀವಕ್ಕೆ ದೊಡ್ಡ ಅನಾಹುತ ಸೃಷ್ಟಿಯಾಗಬಹುದು. ತಂದೆ ತಾಯಿ ಅಥವಾ ಪೋಷಕರು ಎಚ್ಚರ ವಹಿಸಿ ಎಂದು ಹೇಳುವ ಮೂಲಕ ಇಲ್ಲೊಂದೆಡೆ ಇಂಥಹದ್ದೇ ಘೋರ ದುರಂತ ಘಟನೆ ನಡೆದಿದೆ.
ಹೌದು ಸೋಳ್ಳೆಗಳನ್ನು ಓಡಿಸೋಕೆ ಇಡುವ ವಸ್ತು ಎಷ್ಟು ಹಾನಿಕಾರರ ಅನ್ನೋದನ್ನು ಈ ಘಟನೆಯಿಂದ ತಿಳಿಯಬಹುದು. ಎರಡು ವರ್ಷದ ಮಗುವೊಂದು ಮನೆಯಲ್ಲಿಟ್ಟಿದ್ದ ಗುಡ್ನೈಟ್ ಲಿಕ್ವಿಡ್ ಸವಿದು ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾವೂರಿನಲ್ಲಿ ನಡೆದಿದೆ.
ಮಹೇಶ್ ನಾಯ್ಕ ಹಾಗೂ ಶಿಲ್ಪ ದಂಪತಿಯ 2 ವರ್ಷದ ಮಗು ಕುಮಾರ್ ಆರವ್ ಮಹೇಶ್ ನಾಯ್ಕ್ (2) ಸಾವಿಗೀಡಾಗಿರುವ ಮಗು ನೆಲದ ಮೇಲೆ ಇಟ್ಟಿದ್ದ ಆಲ್ಔಟ್ ಮಸ್ಕಿಟೋ ಲಿಕ್ವಿಡ್ ಅನ್ನು ಕುಡಿದು ಮಗು ನಂತರ ಆಸ್ವಸ್ಥಗೊಂಡಿದೆ.
ಇದನ್ನು ಕಂಡು ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ 2 ವರ್ಷದ ಮಗು ಆರವ್ ಸಾವನ್ನಪ್ಪಿದ್ದಾನೆ ಘಟನೆ ಸಂಬಂಧಿಸಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ