ಮುಂಬೈ: ಬುಕ್ ಮಾಡಿದ ಕ್ಯಾಬ್ ಲೇಟಾಗಿ ಬಂದಿದ್ರಿಂದ ಮಹಿಳೆಯೊಬ್ಬರು ಹೋಗಬೇಕಿದ್ದ ಫ್ಲೈಟ್ ಮಿಸ್ ಆಗಿದೆ. ಇದರಿಂದ ನಿರಾಸೆಗೊಂಡ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದು ಆಕೆಗೆ ನ್ಯಾಯ ಸಿಕ್ಕಿರುವ ಘಟನೆ ಬೆಳಕಿಗೆ ಬಂದಿದೆ.
ತುರ್ತು ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಲು ಮಹಿಳೆ ವಿಮಾನಕ್ಕೆ ಟಿಕೆಟ್ ಬುಕ್ ಮಾಡಿದ್ದರು. ಹೀಗಾಗಿ, ಏರ್ಪೋರ್ಟ್ಗೆ ಹೋಗಲು ಉಬರ್ ಕ್ಯಾಬ್ (Uber Cab) ಬುಕ್ ಮಾಡಿದ್ದಳು. ಆದ್ರೆ, ಕ್ಯಾಬ್ ವಿಳಂಬವಾಗಿ ಬಂದಿದ್ರಿಂದ ಆಕೆಗೆ ಫ್ಲೈಟ್ ಮಿಸ್ ಆಗಿದೆ. ಪರಿಣಾಮ ಆಕೆ ಅಂದು ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಇದ್ರಿಂದ ಹತಾಶೆಗೊಂಡ ಮಹಿಳೆ ಉಬರ್ ಸಂಸ್ಥೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ಮಹಿಳೆಗೆ ತಡವಾಗಿ ಕ್ಯಾಬ್ ಸೇವೆ ನೀಡಿದ್ರಿಂದ ಆಕೆ ಹೋಗಬೇಕಿದ್ದ ವಿಮಾನ ಮಿಸ್ ಆಗಿದ್ದಕ್ಕೆ ಆಕೆಗೆ ಪರಿಹಾರವಾಗಿ 20,000 ರೂ. ನೀಡಬೇಕೆಂದು ಉಬರ್ಗೆ ಮುಂಬೈನ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.
ಈ ಮೊತ್ತದ ಅರ್ಧದಷ್ಟು ಮೊತ್ತವು ಮಹಿಳೆಯ ಮಾನಸಿಕ ಒತ್ತಡಕ್ಕೆ, ಉಳಿದ ₹ 10,000 ಆಕೆ ಮಾಡಿದ ವ್ಯಾಜ್ಯದ ವೆಚ್ಚಕ್ಕಾಗಿ ನೀಡಲು ಸೂಚಿಸಲಾಗಿದೆ. ಡೊಂಬಿವಿಲಿಯ ಮಹಿಳಾ ವಕೀಲೆ ಕವಿತಾ ಶರ್ಮಾ ಅವರು 2018 ರಿಂದ ಪ್ರಕರಣದ ವಿರುದ್ಧ ಹೋರಾಡುತ್ತಿದ್ದರು. ಇದೀಗ ಕೊನೆಗೂ ಅವರಿಗೆ ಜಯ ಸಿಕ್ಕಿದೆ.
2018 ರ ಜೂನ್ನಲ್ಲಿ ಕವಿತಾ ಚೆನ್ನೈಗೆ ವಿಮಾನವನ್ನು ಕಾಯ್ದಿರಿಸಿದರು. ಆದರೆ, ಸಮಯಕ್ಕೆ ವಿಮಾನ ನಿಲ್ದಾಣವನ್ನು ತಲುಪಲು ಸಾಧ್ಯವಾಗಿರಲಿಲ್ಲ. ಕವಿತಾ ಬುಕ್ ಮಾಡಿದ 14 ನಿಮಿಷಗಳ ನಂತರ ಕ್ಯಾಬ್ ಆಕೆ ಇದ್ದ ಜಾಗಕ್ಕೆ ತಲುಪದ್ದರಿಂದ ಫ್ಲೈಟ್ ಮಿಸ್ ಆಗಿತ್ತು. ಈ ಸಂಬಂಧ ಅವರು ಕೋರ್ಟ್ ಮೆಟ್ಟಿಲೇರಿದ್ದರು.
BREAKING NEWS : ‘ಬಸವಲಿಂಗ ಶ್ರೀ’ ಆತ್ಮಹತ್ಯೆ ಪ್ರಕರಣದ ತನಿಖೆ ಮಾಗಡಿ ಇನ್ಸ್ಪೆಕ್ಟರ್ ಗೆ ವರ್ಗಾವಣೆ
‘ಬಡವರ ಮಕ್ಕಳು ಬೆಳೀಬೇಕ್ ಕಣ್ರಯ್ಯ’ : ಸೋಶಿಯಲ್ ಮೀಡಿಯಾದಲ್ಲಿ ‘ಡಾಲಿ’ ಧನಂಜಯ್ ಪರ ನಿಂತ ‘ಫ್ಯಾನ್ಸ್ ‘