ರಾಯಚೂರು : ರಾಯಚೂರಿನ ಸಿಂಧನೂರಿನಿಂದ ಮುದಗಲ್ಲಿಗೆ ಮದುವೆಗೆ ಎಂದು ತೆರಳುತ್ತಿದ್ದ ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಅಶೋಕ ಶಿಲಾ ಶಾಸನ ರಸ್ತೆ ಬಳಿ ಈ ಘಟನೆ ನಡೆದಿದೆ.
ಲಾರಿ ಡಿಕ್ಕಿಯಾಗಿ ಬೈಕಿನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಾಪ್ಪಿದ್ದರೆ. ರಾಯಚೂರಿನ ಮಸ್ಕಿಯ ಅಶೋಕ ಶಿಲಾ ಶಾಸನ ರಸ್ತೆ ಬಳಿ ಈ ಘಟನೆ ಸಂಭವಿಸಿದೆ. ಸಿಂಧನೂರು ಮೂಲದ ಸಮೀರ್ (22) ಸಲ್ಮಾ (10) ಮೃತ ದುರ್ದೈವಿಗಳು ಎಂದು ಹೇಳಲಾಗುತ್ತಿದೆ. ಸಿಂಧನೂರಿನಿಂದ ಸವಾರರು ಮದುವೆಗೆ ಮುದುಗಲ್ಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದ್ದು, ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.