ಬೆಂಗಳೂರು: ವಿವಿಧ ದರೋಡೆ, ಸುಲಿಗೆ ಸೇರಿದಂತೆ ರೌಡಿ ಕೃತ್ಯಗಳಲ್ಲಿ ಭಾಗಿಯಾಗಿದ್ದಂತ ಇಬ್ಬರು ರೌಡಿ ಶೀಟರ್ ಗಳನ್ನು ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ, ಜೈಲಿಗಟ್ಟಿದ್ದಾರೆ.
ಶಾಲೆಗಳಿಗೆ ‘ಪಠ್ಯಪುಸ್ತಕ’ ಪೂರೈಕೆ ಸಮಸ್ಯೆಯಾಗಿಲ್ಲ – ಶಿಕ್ಷಣ ಇಲಾಖೆಯ ಸ್ಪಷ್ಟನೆ
ಇಂದು ಕಾರ್ಯಾಚರಣೆ ನಡೆಸಿದಂತ ಸಿಸಿಬಿ ಪೊಲೀಸರು, ಕುಖ್ಯಾತ ರೌಡಿ ಶೀಟರ್ ಸಹೋದರರಾದಂತ ಸಾಗರ್ ಆಲಿಯಾಸ್ ವೀರು ಹಾಗೂ ಸಂಜಯ್ ಎಂಬುವರನ್ನು ಬಂಧಿಸಿದ್ದಾರೆ.
ಅಂದಹಾಗೇ ಹನುಮಂತನಗರ, ಆರ್ ಎಂಸಿ ಯಾರ್ಡ್ ಠಾಣೆಗಳಲ್ಲಿ ರೌಡಿ ಶೀಟರ್ ಆಗಿದ್ದಂತ ವೀರು ಹಾಗೂ ಸಂಜಯ್, ಕೊಲೆ ಯತ್ನ, ದರೋಡೆ, ಸುಲಿಗೆ, ಕಿಡ್ನಾಪ್ ಕೇಸ್ ಗಳಲ್ಲಿ ಸಕ್ರೀಯರಾಗಿದ್ದರು. ಈ ಹಿನ್ನಲೆಯಲ್ಲಿ ಗೂಂಡಾ ಕಾಯ್ದೆಯಡಿ ಬಂಧಿಸಿರುವಂತ ಸಿಸಿಬಿ ಪೊಲೀಸರು, ಇಬ್ಬರನ್ನು ಜೈಲಿಗಟ್ಟಿದ್ದಾರೆ.
ಅಂದಹಾಗೇ ರೌಡಿ ಶೀಟರ್ ಗಳಾಗಿದ್ದಂತ ವೀರು ಹಾಗೂ ಸಂಜಯ್ ಪೊಲೀಸರ ಕಣ್ ತಪ್ಪಿಸಿ ವಿವಿಧ ಕೃತ್ಯಗಳನ್ನು ಎಸಗುತ್ತಿದ್ದರು. ಈ ಮಾಹಿತಿಯ ಹಿನ್ನಲೆಯಲ್ಲಿ ಇಂದು ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.