ಮಂಡ್ಯ/ಚಿತ್ರದುರ್ಗ: ದೀಪಾವಳಿ ಸಂಭ್ರಮದಲ್ಲಿದ್ದಂತ ( Deepavali Festival ) ಆ ಮನೆಗಳಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಕಾರಣ ದೀಪಾವಳಿ ಹಬ್ಬಕ್ಕೆಂದು ಅಂಗಡಿಯನ್ನು ಸ್ವಚ್ಛಗೊಳಿಸುವ ವೇಳೆಯಲ್ಲಿ ವಿದ್ಯುತ್ ಸ್ಪರ್ಶಿಸಿ ( Electric Shock ) ಮಂಡ್ಯದ ಬೆಸಗರಹಳ್ಳಿಯಲ್ಲಿ ಇಬ್ಬರು ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಒಬ್ಬರು ಸಾವನ್ನಪ್ಪಿರೋದರಿಂದ ಆಗಿದೆ.
ಹೌದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ದೀಪಾವಳಿ ಹಬ್ಬಕ್ಕೆಂದು ಅಂಗಡಿ ಸ್ವಚ್ಚಗೊಳಿಸುತ್ತಿದ್ದಂತ ಸಂದರ್ಭದಲ್ಲಿ, ಅಂಗಡಿಯ ಸಮೀಪವೇ ಹಾದು ಹೋಗಿದ್ದಂತ 11 ಕೆವಿ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಧಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಮಧುಸೂದನ್ ಮತ್ತು ವಿವೇಕ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ. ಮಧುಸೂದನ್ ಮತ್ತು ವಿವೇಕ್ ಸಾವನ್ನಪ್ಪಿದ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
BREAKING NEWS : ಮಂಡ್ಯದ ಕೆಆರ್ಎಸ್ ಬೃಂದಾವನ ಪಾರ್ಕ್ನಲ್ಲಿ ಚಿರತೆ ಪ್ರತ್ಯಕ್ಷ : ಪ್ರವಾಸಿಗರಿಗೆ ನಿರ್ಬಂಧ
ಮತ್ತೊಂದೆಡೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ದೀಪಾವಳಿ ಹಬ್ಬಕ್ಕೆಂದು ಅಂಗಡಿಯಲ್ಲಿ ಪೂಜೆ ಮಾಡೋದಕ್ಕಾಗಿ ಅಂಗಡಿಯನ್ನು ಸ್ವಚ್ಚಗೊಳಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಷಿಸಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ವ್ಯಾಪಾರಿ ಮಹಾವೀರ್ ಜೈನ್ ಪುತ್ರ ರಕ್ಷಿತ್ (22) ಎಂಬುದಾಗಿ ತಿಳಿದು ಬಂದಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಸಿದಂತ ಹಿರಿಯೂರು ನಗರ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Rain in Bengaluru: ಬೆಂಗಳೂರಿನಲ್ಲಿ ಮತ್ತೆ ವರುಣನ ಆರ್ಭಟ ಆರಂಭ: ನಗರದ ಹಲವೆಡೆ ಮಳೆ ಶುರು