ನವದೆಹಲಿ: ಟ್ವಿಟರ್ನ ಹೊಸ ಮಾಲೀಕ ಎಲೋನ್ ಮಸ್ಕ್ ವಿಧಿಸಿದ ಕೆಲಸದ ಗಡುವನ್ನು ಪೂರೈಸಲು ಉದ್ಯೋಗಿಗಳು ಹರಸಾಹಸ ಪಡುತ್ತಿದ್ದಾರೆ. ಉದ್ಯೋಗಿಗಳು ಕಂಪನಿಯ ಕಚೇರಿಗಳಲ್ಲಿ ನೆಲದ ಮೇಲೆ ಮಲಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ಟ್ವಿಟರ್ ಉದ್ಯೋಗಿಯೊಬ್ಬರು ತಮ್ಮ ಬಾಸ್ ಕಚೇರಿಯಲ್ಲಿ ನೆಲದ ಮೇಲೆ ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಸ್ಕ್ ನೀಡಿದ ಕೆಲಸವನ್ನು ಪೂರೈಸಲು ಟ್ವಿಟರ್ ಮ್ಯಾನೇಜರ್ಗಳು ಕೆಲವು ಸಿಬ್ಬಂದಿಗೆ ವಾರದಲ್ಲಿ ಏಳು ದಿನಗಳು 12-ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡಲು ಹೇಳಿದ್ದಾರೆ. ಇದು ವಾರಕ್ಕೆ 84 ಗಂಟೆಗಳವರೆಗೆ ಸಮಾನವಾಗಿರುತ್ತದೆ.
ಟ್ವಿಟರ್ ಸ್ಪೇಸ್ಗಳ ಉತ್ಪನ್ನ ನಿರ್ವಾಹಕ ಇವಾನ್ ಜೋನ್ಸ್ ಅವರು ತಮ್ಮ ಬಾಸ್ ಕಚೇರಿಯ ನೆಲದ ಮೇಲೆ ಗಾಢ ನಿದ್ದೆಯಲ್ಲಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಟ್ವಿಟರ್ನಲ್ಲಿ ಉತ್ಪನ್ನ ನಿರ್ವಹಣೆಯ ನಿರ್ದೇಶಕರಾದ ಎಸ್ತರ್ ಕ್ರಾಫೋರ್ಡ್ ಅವರು ಮಲಗಿರುವುದನ್ನು ತೋರಿಸುತ್ತದೆ. ಈ ಫೋಟೋವನ್ನು ಯಾವಾಗ ಮತ್ತು ಎಲ್ಲಿ ತೆಗೆದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
When you need something from your boss at elon twitter pic.twitter.com/hfArXl5NiL
— evan (@evanstnlyjones) November 2, 2022
ಮಾಧ್ಯಮಗಳ ಪ್ರಕಾರ, ಟ್ವಿಟರ್ನಲ್ಲಿನ ಉದ್ಯೋಗಿಗಳು ಹೆಚ್ಚು ಸಮಯ ಕೆಲಸ ಮಾಡುತ್ತಿದ್ದಾರೆ. ಏಕೆಂದರೆ ಮಸ್ಕ್ ಅವರು ಟ್ವಿಟರ್ ಉದ್ಯೋಗಿಗಳು ವಾರದ ಏಳು ದಿನವೂ 12 ಗಂಟೆ ಕೆಲಸ ಮಾಡಬೇಕು. ಇಲ್ಲದಿದ್ರೆ, ಅವರನ್ನು ಕೆಲಸದಿಂದ ತೆಗೆದುಹಾಕಲಾಗುವ ನಿರ್ಧಾರ ಕೈಗೊಳ್ಳಲಾಗುವುದು ಎನ್ನಲಾಗಿದೆ.
ಟ್ವಿಟ್ಟರ್ನಲ್ಲಿ ಮ್ಯಾನೇಜರ್ಗಳು ಕೆಲಸವನ್ನು ಪೂರೈಸಲು ವಾರದ ಏಳು ದಿನಗಳು 12-ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡಲು ಸೂಚಿಸಲಾಗಿದೆ. ಅಧಿಕಾವಧಿ ವೇತನ, ಪರಿಹಾರದ ಸಮಯ ಅಥವಾ ಉದ್ಯೋಗ ಭದ್ರತೆಯ ಬಗ್ಗೆ ಯಾವುದೇ ಚರ್ಚೆಯಿಲ್ಲದೆ ಈ ಸೂಚನೆಗಳನ್ನು ನೀಡಲಾಗಿದೆ ಎಂದು ವರದಿ ಹೇಳಿದೆ.
‘ಭಾರತ ಮಾತೆ ವಿಧವೆಯಲ್ಲ’: ಹಣೆಗೆ ʻಬಿಂದಿʼ ಇಡದ ಪತ್ರಕರ್ತೆಯೊಂದಿಗೆ ಮಾತನಾಡಲು ನಿರಾಕರಿಸಿದ ಮಹಾ ಕಾರ್ಯಕರ್ತ