ನವದೆಹಲಿ: ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್, ಟ್ವಿಟರ್ ಕಂಪನಿಯ ಮಾಲೀಕತ್ವ ವಹಿಸಿಕೊಂಡ ಬೆನ್ನಲ್ಲೇ ಅಲ್ಲಿನ ಉದ್ಯೋಗಿಗಳ ಉದ್ಯೋಗ ಭವಿಷ್ಯ ಅನಿಶ್ಚಿತತೆಯಲ್ಲಿದೆ. ಕಂಪನಿಯ 7500 ಉದ್ಯೋಗಿಗಳ ಪೈಕಿ ಅರ್ಧಕರ್ಧ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಹೇಳಿರುವ ಎಲಾನ್ ಮಸ್ಕ್ ಈಗಾಗಲೇ ವಜಾ ಪ್ರಕ್ರಿಯೆ ಆರಂಭಿಸಿದ್ದಾರೆ. ಭಾರತದಲ್ಲಿಯೂ ಶುಕ್ರವಾರದಿಂದ ಉದ್ಯೋಗಿಗಳ ಕಡಿತ ಶುರು ಮಾಡಿದ್ದಾರೆ.
BIGG NEWS : ಚಂದ್ರಶೇಖರ್ ನನ್ನು ಕಿಡ್ನಾಪ್ ಮಾಡಿ, ಚಿತ್ರಹಿಂಸೆ ನೀಡಿ ಕೊಲೆ : ಶಾಸಕ ರೇಣುಕಾಚಾರ್ಯ ಗಂಭೀರ ಆರೋಪ
ಈಗಾಗಲೇ ಕೆಲವು ಉದ್ಯೋಗಿಗಳು ಕೆಲಸದಿಂದ ವಜಾಗೊಂಡಿರುವ ಕುರಿತಾಗಿ ಮೇಲ್ ಸ್ವೀಕರಿಸಿದ್ದು, ಈ ಬಗ್ಗೆ ಕೆಲವರು ತಮ್ಮ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೆಲಸದಿಂದ ದಿಢೀರ್ ವಜಾ ಮಾಡಿರುವುದು ಅನೇಕ ಆಘಾತ ತಂದಿದೆ. ಕೆಲವರು ಕಣ್ಣೀರು ಸಹ ಹಾಕಿದ್ದಾರೆ. ಆದರೆ, 25 ವರ್ಷದ ಯಶ್ ಅಗರ್ವಾಲ್ ಎಂಬುವರು ಕೆಲಸದಿಂದ ವಜಾಗೊಂಡ ಕೂಡಲೇ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಡಿರುವ ಟ್ವೀಟ್, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಕೆಲಸದಿಂದ ವಜಾಗೊಂಡಿರುವ ಬಗ್ಗೆ ಕಿಂಚಿತ್ತೂ ಬೇಸರಪಟ್ಟುಕೊಳ್ಳದೇ ಟ್ವಿಟರ್ ಕಂಪನಿಗೆ ಯಶ್ ಅಗರ್ವಾಲ್ ಧನ್ಯವಾದ ಅರ್ಪಿಸಿದ್ದಾರೆ. ಟ್ವಿಟರ್ ಲೋಗೋ ಇರುವ ಎರಡು ದಿಂಬುಗಳನ್ನು ಕೈಯಲ್ಲಿ ಹಿಡಿದಿರುವ ಪೋಟೋ ಪೋಸ್ಟ್ ಮಾಡಿರುವ ಅಗರ್ವಾಲ್, ಇದೀಗ ತಾನೇ ಕೆಲಸದಿಂದ ವಜಾಗೊಂಡೆ.
BIGG NEWS : ಚಂದ್ರಶೇಖರ್ ನನ್ನು ಕಿಡ್ನಾಪ್ ಮಾಡಿ, ಚಿತ್ರಹಿಂಸೆ ನೀಡಿ ಕೊಲೆ : ಶಾಸಕ ರೇಣುಕಾಚಾರ್ಯ ಗಂಭೀರ ಆರೋಪ
ಟ್ವಿಟರ್, ಈ ತಂಡದ ಹಾಗೂ ಸಂಸ್ಕೃತಿಯ ಭಾಗವಾಗಿದ್ದು, ಇದುವರೆಗಿನ ಶ್ರೇಷ್ಠ ಸವಲತ್ತು ಮತ್ತು ಇದು ಒಂದು ಸಂಪೂರ್ಣ ಗೌರವವಾಗಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ನೀವು ಕೆಲಸ ಮಾಡಿದ ಸ್ಥಳವನ್ನು ಪ್ರೀತಿಸಿ (#LoveWhereYouWorked) ಮತ್ತು ಟ್ವಿಟರ್ ಅನ್ನು ಪ್ರೀತಿಸಿ (LoveTwitter) ಎಂಬ ಹ್ಯಾಶ್ಟ್ಯಾಗ್ ಸಹ ಹಾಕಿದ್ದಾರೆ.
Just got laid off.
Bird App, it was an absolute honour, the greatest privilege ever to be a part of this team, this culture 🫡💙#LoveWhereYouWorked #LoveTwitter pic.twitter.com/bVPQxtncIg— Yash Agarwal✨ (@yashagarwalm) November 4, 2022
ಅಗರ್ವಾಲ್ ಹಾಕಿರುವ ಫೋಟೋ ಟ್ವಿಟರ್ ಕಚೇರಿಯಲ್ಲಿ ತೆಗೆದಿರುವಂತೆ ಕಾಣುತ್ತಿದೆ. ಆತ ಸಾರ್ವಜನಿಕ ನೀತಿ ತಂಡದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಗರ್ವಾಲ್ ಮಾಡಿರುವ ಟ್ವೀಟ್ ಇದೀಗ ವೈರಲ್ ಆಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ಈವರೆಗೂ 43 ಸಾವಿರಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ ಮತ್ತು 3 ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್ ಮಾಡಿದ್ದಾರೆ. ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದು, ಅಗರ್ವಾಲ್ ಅವರ ಧನ್ಯತಾಭಾವಕ್ಕೆ ಫಿದಾ ಆಗಿದ್ದಾರೆ.
ಜೀವನದ ಕಡೆಗೆ ಈ ಸಕಾರಾತ್ಮಕ ದೃಷ್ಟಿಕೋನವನ್ನು ನೋಡುವುದು ತುಂಬಾ ಅಪರೂಪ. ನೀವು ಆಯ್ಕೆಮಾಡುವ ಎಲ್ಲದರಲ್ಲೂ ನೀವು ಸಾಟಿಯಿಲ್ಲದ ಯಶಸ್ಸು ಮತ್ತು ಸಂತೋಷವನ್ನು ಬಯಸುತ್ತೇವೆ. ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು ನೆಟ್ಟಿಗರು ಅಗರ್ವಾಲ್ಗೆ ಶುಭಕೋರಿದ್ದಾರೆ.
BIGG NEWS : ಚಂದ್ರಶೇಖರ್ ನನ್ನು ಕಿಡ್ನಾಪ್ ಮಾಡಿ, ಚಿತ್ರಹಿಂಸೆ ನೀಡಿ ಕೊಲೆ : ಶಾಸಕ ರೇಣುಕಾಚಾರ್ಯ ಗಂಭೀರ ಆರೋಪ
ಅಂದಹಾಗೆ ಟ್ವಿಟರ್ ಖರೀದಿ ಬಳಿಕ ಸುಮಾರು 3,700 ಉದ್ಯೋಗಿಗಳನ್ನು ವಜಾ ಮಾಡಲು ಮುಂದಾಗಿರುವ ಮಾಲೀಕ ಎಲಾನ್ ಮಸ್ಕ್ ಭಾರತದಲ್ಲಿ ಶುಕ್ರವಾರದಿಂದ ಉದ್ಯೋಗಿಗಳ ಕಡಿತ ಶುರು ಮಾಡಿದ್ದಾರೆ. ಎಷ್ಟು ಮಂದಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ಆದರೆ ಮಾರಾಟ, ಎಂಜಿನಿಯರ್ಗಳು ಮತ್ತು ಪಾಲುದಾರಿಕೆ ವಿಭಾಗದ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಟ್ವಿಟರ್ ಭಾರತದಲ್ಲಿನ ತನ್ನ ಒಟ್ಟು ಉದ್ಯೋಗಿಗಳಲ್ಲಿ ಶೇ. 50ಕ್ಕೂ ಹೆಚ್ಚು ಮಂದಿಯನ್ನು ವಜಾ ಮಾಡಿದೆ. ಆದರೆ ಸೇಲ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಒಂದಷ್ಟು ಜನ ಕೆಲಸ ಉಳಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
BIGG NEWS : ಚಂದ್ರಶೇಖರ್ ನನ್ನು ಕಿಡ್ನಾಪ್ ಮಾಡಿ, ಚಿತ್ರಹಿಂಸೆ ನೀಡಿ ಕೊಲೆ : ಶಾಸಕ ರೇಣುಕಾಚಾರ್ಯ ಗಂಭೀರ ಆರೋಪ