ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚಿಗೆ ವಿಕ್ಟೋರಿಯಾ ಆಸ್ಪತ್ರೆಯ ವೈದೇ ಕೃತಿಕಾ ರೆಡ್ಡಿ ಪತಿ ಮಹೇಂದ್ರ ರೆಡ್ಡಿ ಇಂದಲೇ ಭೀಕರವಾಗಿ ಕೊಲೆಯಾಗಿದ್ದು ಬೆಳಕಿಗೆ ಬಂದಿತ್ತು. ಇದೀಗ ವಿಕ್ಟೊರಿಯ ಆಸ್ಪತ್ರೆಯ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ವೈದ್ಯ ಮಹೇಂದ್ರರೆಡ್ಡಿಯ ಮತ್ತೊಂದು ಕ್ರೂರಮುಖ ಬಯಲಾಗಿದೆ. ಹಂತ ಹಂತವಾಗಿ ಪತ್ನಿಗೆ ಹತ್ಯೆಗೆ ಪಾಪಿ ಪತಿ ಸ್ಕೆಚ್ ಹಾಕಿದ್ದ.
ಕೃತಿಕಾಳನ್ನು ಕೊಲ್ಲಲೇಬೇಕೆಂದು ಆತ ಸ್ಕೆಚ್ ಹಾಕಿದ ಹಿನ್ನೆಲೆಯಲ್ಲಿ, ಮನೆಗೆ ನಾಟ್ ಫಾರ್ ಸೇಲ್ ಔಷಧಿಯನ್ನು ಮಹೇಂದ್ರ ರೆಡ್ಡಿ ತಂದಿದ್ದ. ಗ್ಯಾಸ್ಟ್ರಿಕ್ ಔಷಧಿ, ಗ್ಲುಕೋಸ್ ಬಾಟಲ್ ಸೇರಿ ಹಲವು ಔಷಧಿಗಳು ಇದೀಗ ಆತನ ಮನೆಯಲ್ಲಿ ಪತ್ತೆಯಾಗಿದೆ. ಕೃತಿಕಾ ರೆಡ್ಡಿ ಇದ್ದ ರೂಂನಲ್ಲಿ ಈ ಎಲ್ಲಾ ಔಷಧಿಗಳು ಪತ್ತೆಯಾಗಿವೆ. ಒಂದು ರೀತಿ ಕೃತಿಕ ರೂಮನ್ನು ಮಹೇಂದ್ರ ಕ್ಲಿನಿಕ್ ರೀತಿ ಬದಲಾಯಿಸಿದ್ದ. ಅಲ್ಲದೆ ಋತುಚಕ್ರದ ಸಮಯದಲ್ಲೂ ಕೂಡ ಡ್ರಿಪ್ಸ್ ಹಾಕಿಕೊಳ್ಳುವಂತೆ ಮಹೇಂದ್ರ ಕೃತಿಕಾಗಿ ಒತ್ತಡ ಹೇರುತ್ತಿದ್ದ. ಕ್ಯಾನುಲ ಚುಚ್ಚಿ ಕೈತುಂಬ ಗಾಯ ಮಾಡಿದ್ದ