ಉತ್ತರ ಕೆರೊಲಿನಾ: ಮಂಗಳವಾರ ಯುಎಸ್ನಲ್ಲಿ ಹೆಲಿಕಾಪ್ಟರ್ವೊಂದು ಪತನವಾಗಿದ್ದು, ಘಟನೆಯಲ್ಲಿ ಉತ್ತರ ಕೆರೊಲಿನಾ ದೂರದರ್ಶನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಹವಾಮಾನಶಾಸ್ತ್ರಜ್ಞ ಮತ್ತು ಪೈಲಟ್ ಸಾವನ್ನಪ್ಪಿದ್ದಾರೆ.
ರಾಬಿನ್ಸನ್ R44 ಎಂ ಹೆಲಿಕಾಪ್ಟರ್ ಚಾರ್ಲೊಟ್ ಎಂಬಲ್ಲಿ ಪತನವಾಗಿದೆ. ಇದರಲ್ಲಿದ್ದ ಹವಾಮಾನಶಾಸ್ತ್ರಜ್ಞ ಜೇಸನ್ ಮೈಯರ್ಸ್ ಮತ್ತು ಪೈಲಟ್ ಚಿಪ್ ತಯಾಗ್ ಸಾವನ್ನಪ್ಪಿದ್ದಾರೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಹೇಳಿಕೆಯಲ್ಲಿ ತಿಳಿಸಿದೆ.
ದುರಂತ ಸಂಭವಿಸುವ ಮೊದಲೇ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬೀಳುತ್ತಿದ್ದ ಹೆಲಿಕಾಪ್ಟರ್ ಅನ್ನು ಪೈಲಟ್ ತಕ್ಷಣವೇ ಬೇರೆಡೆಗೆ ತಿರುಗಿಸಿದ ಪರಿಣಾಮ ಹೆಲಿಕಾಪ್ಟರ್ ರಸ್ತೆಯಿಂದ ಪಕ್ಕಕ್ಕೆ ಬಿದ್ದಿದೆ. ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
BIGG NEWS: ಕೇಂದ್ರದಿಂದ ಪ್ರತಿ ತಿಂಗಳು 16 ಲಕ್ಷ ಉದ್ಯೋಗ ಸೃಷ್ಟಿ: ರೈಲ್ವೆ ಸಚಿವ ವೈಷ್ಣವ್
SHOCKING NEWS: ಹೆರಿಗೆ ನೋವಿನಿಂದ ಬಳಲುತ್ತಿದ್ದ HIV+ ಮಹಿಳೆಯನ್ನು ಪರೀಕ್ಷಿಸಲು ನಿರಾಕರಿಸಿದ ವೈದ್ಯರು, ಮಗು ಸಾವು