ತುಮಕೂರು: ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಿ, ಮನೆಗೆ ತೆರಳುತ್ತಿದ್ದಂತ ವೇಳೆಯಲ್ಲೇ, ವಿದ್ಯಾರ್ಥಿಯೊಬ್ಬನಿಗೆ ವಿದ್ಯುತ್ ತಗುಲಿ ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ಹೆಚ್.ಕಾವಲ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ.
ವಿದ್ಯಾರ್ಥಿ ಹೇಮಂತ್ ಎಂಬಾತ ಕಾವಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದನು. ಇಂದು ಸ್ವಾತಂತ್ರಯ ದಿನಾಚರಣೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ರಸ್ತೆ ಬದಿಯಲ್ಲಿ ಅಳವಡಿಸಿದ್ದಂತ ವಿದ್ಯುತ್ ಕಂಬ ಮುಟ್ಟಿದ್ದಾನೆ. ಈ ಪರಿಣಾಮ ವಿದ್ಯುತ್ ಶಾಕ್ ನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅಂದಹಾಗೇ ವಿದ್ಯುತ್ ಕಂಬದಲ್ಲಿ ಶಾಕ್ ಹೊಡೆಯುತ್ತಿರುವ ಬಗ್ಗೆ ಕೆಇಬಿಯವರಿಗೆ ಹಲವು ಬಾರಿ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೂ ಕಂಬವನ್ನು ಬದಲಾವಣೆ ಮಾಡಿರಲಿಲ್ಲ. ಹೀಗಾಗಿಯೇ ಇಂದು ವಿದ್ಯಾರ್ಥಿ ಹೇಮಂತ್ ಧಾರುಣವಾಗಿ ಸಾವನ್ನಪ್ಪುವಂತೆ ಆಗಿದೆ ಅಂತ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ತುಮಕೂರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೇ ಘೋರ ದುರಂತ: ವಿದ್ಯುತ್ ಶಾಕ್ ನಿಂದ ವಿದ್ಯಾರ್ಥಿ ಸ್ಥಳದಲ್ಲೇ ಸಾವು
‘ರಾಷ್ಟ್ರೀಯ ಮಹಿಳಾ ಆಯೋಗ’ದ ಸದಸ್ಯೆ ಸ್ಥಾನಕ್ಕೆ ‘ನಟಿ ಖುಷ್ಬೂ’ ರಾಜೀನಾಮೆ | Khushbu resigns
GOOD NEWS : 545 ‘PSI’ ಅಭ್ಯರ್ಥಿಗಳಿಗೆ ಶೀಘ್ರ ನೇಮಕಾತಿ ಆದೇಶ ಪತ್ರ ವಿತರಣೆ : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ
BIGG NEWS: ‘KPTCL 226 ಜೆಇ ವರ್ಗಾವಣೆ’ಯಲ್ಲಿ ಮತ್ತೊಂದು ಕರ್ಮಕಾಂಡ: ಪುಲ್ ‘ಡೀಲ್ ಮಗಾ’ ಡೀಲ್