ವಾಷಿಂಗ್ಟನ್ (ಯುಎಸ್): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಟ್ವಿಟರ್(Twitter) ಖಾತೆ ಭಾನುವಾರ ಮತ್ತೆ ಕಾಣಿಸಿಕೊಂಡಿದೆ.
ಎಲಾನ್ ಮಸ್ಕ್(Elon Musk) ಅವರು ತಮ್ಮ ಖಾತೆಯನ್ನು ಮರುಸ್ಥಾಪಿಸಲು ಖಚಿತಪಡಿಸಿದ ನಂತರ, ಮತ್ತೆ ಟ್ರಂಪ್ ಅವರ ಟ್ವಿಟರ್ ಖಾತೆ ಕಾಣಿಸಿಕೊಂಡಿದೆ.
ಜನವರಿ 6, 2021 ರಂದು ಯುಎಸ್ ಕ್ಯಾಪಿಟಲ್ನಲ್ಲಿ ಅವರ ಬೆಂಬಲಿಗರಿಂದ ನಡೆದ ಗಲಭೆಯ ನಂತರ ಟ್ರಂಪ್ ಅವರ ಟ್ವಿಟರ್ ಖಾತೆಯು ನಿಷ್ಕ್ರಿಯವಾಗಿತ್ತು. ಈ ವಿಷಯದ ಕುರಿತು ಸಮೀಕ್ಷೆಯ ನಂತರ “ಟ್ರಂಪ್ ಅವರ ಖಾತೆಯನ್ನು ಮರುಸ್ಥಾಪಿಸಲಾಗುವುದು” ಎಂದು ಮಸ್ಕ್ ಟ್ವೀಟ್ ಮಾಡಿದ ನಂತರ ಬಳಕೆದಾರರಿಗೆ ಟ್ರಂಪ್ ಖಾತೆ ಗೋಚರಿಸಿದೆ.
The people have spoken.
Trump will be reinstated.
Vox Populi, Vox Dei. https://t.co/jmkhFuyfkv
— Elon Musk (@elonmusk) November 20, 2022
ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸಬೇಕೆ ಎಂದು ಕೇಳುವ ಸಮೀಕ್ಷೆಯಲ್ಲಿ 15 ದಶಲಕ್ಷಕ್ಕೂ ಹೆಚ್ಚು ಜನರು ಮತ ಚಲಾಯಿಸಿದ್ದಾರೆ. 51.8 ಪ್ರತಿಶತದಷ್ಟು ಕಡಿಮೆ ಬಹುಮತದೊಂದಿಗೆ ಸಕಾರಾತ್ಮಕವಾಗಿ ಮತ ಚಲಾಯಿಸಿದ್ದಾರೆ. ಇದಾದ ನಂತ್ರ, ಮಸ್ಕ್ ಡೊನಾಲ್ಡ್ ಟ್ರಂಪ್ಗೆ ಟ್ವಿಟರ್ನಲ್ಲಿ ಮರಳಲು ಅವಕಾಶ ನೀಡಿದರು.
ಉಜ್ಜಯಿನಿ: ಭೈರವನಾಥನಿಗೆ ಮದ್ಯ, ಸಿಗರೇಟ್ ಸೇರಿ 1,351 ಬಗೆಯ ಖಾದ್ಯ ಅರ್ಪಣೆ
ಉಜ್ಜಯಿನಿ: ಭೈರವನಾಥನಿಗೆ ಮದ್ಯ, ಸಿಗರೇಟ್ ಸೇರಿ 1,351 ಬಗೆಯ ಖಾದ್ಯ ಅರ್ಪಣೆ