ಮಧ್ಯಪ್ರದೇಶ: ಕೆಲವು ಸ್ಥಳಗಳಲ್ಲಿ ಕೋಳಿ ಕೂಗುವಿಕೆಯು ಜನರು ಬೆಳಿಗ್ಗೆ ಬೇಗನೆ ಏಳಲು ಸಹಾಯ ಮಾಡುತ್ತದೆ. ಆದರೆ, ಮಧ್ಯಪ್ರದೇಶದ ಇಂದೋರ್ನಲ್ಲಿ ಈ ವಿಚಾರವಾಗಿ ವೈದ್ಯರೊಬ್ಬರು ತಮ್ಮ ನೆರೆಮನೆಯ ಮಹಿಳೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ನಡೆದಿದೆ.
ನಗರದ ಪಲಾಸಿಯಾ ಪ್ರದೇಶದಲ್ಲಿ ವೈದ್ಯ ಅಲೋಕ್ ಮೋದಿ ಅವರು ವಾಸವಿದ್ದು, ನೆರೆಮನೆಯ ಮಹಿಳೆ ಸಾಕಿರುವ ಹುಂಜನ ಕೂಗಿನಿಂದ ಬೇಸರಗೊಂಡಿದ್ದಾನೆ. ನಾನು ಕೆಲಸ ಮುಗಿಸಿ ತಡರಾತ್ರಿ ಮನೆಗೆ ಬರುತ್ತೇನೆ. ಈ ಕೋಳಿಯ ಮುಂಜಾನೆ ವೇಳೆ ಕೂಗುತ್ತಿರುತ್ತವೆ. ಇದ್ರಿಂದ ನನ್ನ ನಿದ್ರೆಗೆ ಸಮಸ್ಯೆ ಉಂಟಾಗಿದೆ ಎಂದು ಅಲೋಕ್ ನೆರೆಹೊರೆಯವರ ವಿರುದ್ಧ ದೂರು ನೀಡಿದ್ದಾರೆ.
ದೂರಿನಲ್ಲಿ, ತನ್ನ ಮನೆಯ ಸಮೀಪ ಮಹಿಳೆಯೊಬ್ಬರು ಕೋಳಿ ಮತ್ತು ನಾಯಿಗಳನ್ನು ಸಾಕುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ 5 ಗಂಟೆಗೆ ಕೋಳಿ ಕೂಗುತ್ತದೆ. ಇದರಿಂದಾಗಿ ನನ್ನ ನಿದ್ರೆಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಪೊಲೀಸರು, ಮೊದಲು ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಯದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
BIG NEWS : NDTV ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಣಯ್ ರಾಯ್, ಪತ್ನಿ ರಾಧಿಕಾ
BIGG NEWS : ಸೈಬೀರಿಯಾದಲ್ಲಿ 48,500 ವರ್ಷಗಳ ಹಿಂದಿನ ‘ಝೋಂಬಿ ವೈರಸ್ ಪತ್ತೆ ‘ | Zombie Virus
BIGG NEWS : ಗಡಿ ವಿವಾದದ ನಡುವೆಯೇ ಡಿ.2 ರಂದು ಬೆಳಗಾವಿಗೆ ಸಿಎಂ ಬೊಮ್ಮಾಯಿ ಭೇಟಿ
BIG NEWS : NDTV ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಣಯ್ ರಾಯ್, ಪತ್ನಿ ರಾಧಿಕಾ