Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ನಾಳೆ ಕರ್ನಾಟಕ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಶಾಲಾ ಪರೀಕ್ಷೆ, ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ಮಾಹಿತಿ

22/04/2026 8:28 PM

ಪಶ್ಚಿಮ ಏಷ್ಯಾ ಬಿಕ್ಕಟ್ಟು: ‘ಭಾರತ ನಿರ್ಣಾಯಕ ಪಾತ್ರ ವಹಿಸಿ ಯಶಸ್ಸು ಸಾಧಿಸಲಿದೆ’ :ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ!

22/04/2026 8:21 PM

ಬಿಸಿಲಿನಿಂದ ಸುರಕ್ಷಿತರಾಗಿರಲು ಈ ಕ್ರಮಗಳನ್ನು ತಪ್ಪದೆ ಅನುಸರಿಸಿ!

22/04/2026 8:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಟ್ರೆಂಡ್ಸ್ ಅವಂತ್ರ ರಾಯಭಾರಿಯಾದ ‘ಕಾಂತಾರದ ರಾಜಕುಮಾರಿ’ ರುಕ್ಮಿಣಿ ವಸಂತ್
INDIA

ಟ್ರೆಂಡ್ಸ್ ಅವಂತ್ರ ರಾಯಭಾರಿಯಾದ ‘ಕಾಂತಾರದ ರಾಜಕುಮಾರಿ’ ರುಕ್ಮಿಣಿ ವಸಂತ್

By kannadanewsnow0914/10/2025 9:48 PM

ನವದೆಹಲಿ: ರಿಲಯನ್ಸ್ ರೀಟೇಲ್ ನ ಅವಂತ್ರ ಎಂಬುದು ಸಮಕಾಲೀನ ಸೀರೆಗಳನ್ನು ಖರೀದಿಸಲು ಅತ್ಯುತ್ತಮವಾದ ತಾಣವಾಗಿದೆ. ಆಧುನಿಕ ಭಾರತೀಯ ಮಹಿಳೆಯರ ಆಯ್ಕೆಗೆ ಹೇಳಿ ಮಾಡಿಸಿದ ಸ್ಥಳ ಇದು. ಇದೀಗ ಹೊಸದಾಗಿ ಹಬ್ಬದ ಅಭಿಯಾನವನ್ನು ಅವಂತ್ರ ಶುರು ಮಾಡಿದ್ದು, ದೇಶದೆಲ್ಲೆಡೆ ಈಗ ಮನೆ ಮಾತಾಗಿರುವ ಚೆಲುವೆ, ಕಾಂತಾರ ಸಿನಿಮಾದ ರಾಜಕುಮಾರಿ ಹಾಗೂ ಬಹು ಭಾಷಾ ನಟಿ ರುಕ್ಮಿಣಿ ವಸಂತ್ ಅವರು ರಾಯಭಾರಿ ಆಗಿದ್ದಾರೆ. ಹಬ್ಬಗಳು ಬಂತೆಂದರೆ ಸಂಭ್ರಮ, ಅದರಲ್ಲೂ ಹೆಣ್ಣುಮಕ್ಕಳಿಗೆ ಮತ್ತೂ ವಿಶೇಷವಾದ ಸಂದರ್ಭ ಇದಾಗಿರುತ್ತದೆ. ಹೌದು, ಇವತ್ತಿನ ಮಹಿಳೆಯಲ್ಲಿ ಆತ್ಮವಿಶ್ವಾಸ ಕಾಣಬಹುದು. ತನ್ನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ, ಗುರುತನ್ನು ತೆರೆದಿಡುವ ಹಾಗೂ ತನ್ನ ಭಾವನೆಯನ್ನು ಅಭಿವ್ಯಕ್ತಪಡಿಸುವುದಕ್ಕಾಗಿ ಹಬ್ಬದ ಋತುವಿನಲ್ಲಿ ಅವಂತ್ರಗಿಂತ ಮತ್ತೊಂದು ಉತ್ತಮ ಆಯ್ಕೆ ಬೇರಾವುದೂ ಇಲ್ಲ.

ಹಬ್ಬದ ಸಂಭ್ರಮಕ್ಕೆ ಮಹಿಳೆಯರು ಹೇಗೆ ಇನ್ನೂ ಹೆಚ್ಚು ಸಂತಸವನ್ನು ಸೇರಿಸುತ್ತಾರೆ ಹಾಗೂ ಪ್ರತಿ ಕ್ಷಣವನ್ನೂ ಹೇಗೆ ವಿಶೇಷವಾಗಿಸುತ್ತಾರೆ ಮತ್ತು ಆ ಮೂಲಕ ಹಬ್ಬದ ಸಂದೇಶವನ್ನು ಹೇಗೆ ದಾಟಿಸುತ್ತಾರೆ ಎಂಬುದನ್ನು ತುಂಬ ಸೊಗಸಾಗಿ ತೆರೆದಿಡಲಾಗಿದೆ. ಈ ಅಭಿಯಾನವನ್ನು “ಮೈ ವೇ” (My way) ಎಂಬ ಸಿದ್ಧಾಂತ ಅಡಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ.

ಅಂದ ಹಾಗೆ ಈ ಅಭಿಯಾನದ ಜಾಹೀರಾತಿನಲ್ಲಿ ಪ್ರತಿ ಮಹಿಳೆಗೂ ಹೇಗೆ ಈ ಕ್ಷಣವನ್ನು ತಮ್ಮದಾಗಿಸಿಕೊಳ್ಳುವುದು ಹಾಗೂ ತಮ್ಮದೇ ಸ್ಥಾನವನ್ನು ಹೇಗೆ ಗುರುತಿಕೊಳ್ಳುವುದು ಎಂಬುದನ್ನು ಮುಖ್ಯ ವಿಷಯವಾಗಿ ತೆಗೆದುಕೊಳ್ಳಲಾಗಿದೆ. ಭಾರತೀಯ ಹಬ್ಬಗಳ ಅದ್ಭುತ ಸಂಭ್ರಮದ ಹಿನ್ನೆಲೆಯಲ್ಲಿ ಕುಟುಂಬಗಳು ಒಗ್ಗೂಡುವುದು, ಸಂಪ್ರದಾಯಗಳ ಆಚರಣೆ ಮತ್ತು ನಗು ಈ ಎಲ್ಲವನ್ನು ತುಂಬ ಚೆನ್ನಾಗಿ ಚಿತ್ರಿಸಲಾಗಿದೆ. ಈ ಎಲ್ಲ ಖುಷಿಯ ವಾತಾವರಣದ ಮಧ್ಯೆ ಸೌಂದರ್ಯದ ಖನಿಯಾದ ರುಕ್ಮಿಣಿ ವಸಂತ್ ಅವರು ಶ್ರೀಮಂತಿಕೆಯ- ಅವಂತ್ರದ ರೇಷ್ನೆ ಸೀರೆಯುಟ್ಟು ಮಿರಮಿರ ಮಿಂಚಿದ್ದಾರೆ.

ಅವಂತ್ರ ಒಂದು ಬ್ರ್ಯಾಂಡ್ ಆಗಿ ಐವತ್ತಕ್ಕೂ ಹೆಚ್ಚಿನ ಬಗೆಯ ಸೀರೆಗಳನ್ನು ಒಂದೇ ಜಾಗದಲ್ಲಿ ಖರೀದಿ ಮಾಡಬಹುದು. ತುಂಬ ವಿಶಿಷ್ಟವಾದ ಮತ್ತು ಸಾಂಸ್ಕೃತಿಕವಾಗಿಯೂ ಮುಖ್ಯವಾದ ಸ್ಥಳ ಇದಾಗಿರಲಿದೆ. ಭಾರತೀಯ ಯುವ ಮಹಿಳೆಯರನ್ನು ಅವಂತ್ರ ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡಿದೆ- ಈಗಿನ ಮಹಿಳೆಯರಿಗೆ ತಮ್ಮ ಗುರುತನ್ನು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸಲು ಹಾಗೂ ಸ್ವಂತ ಭಾವಾಭಿವ್ಯಕ್ತಿ ಸಂಕೇತವಾಗಿ ಈ ಸೀರೆಗಳು ಕಾಣುತ್ತವೆ.

ರುಕ್ಮಿಣಿ ಅವರನ್ನು ತಮ್ಮ ಬ್ರ್ಯಾಂಡ್ ರಾಯಭಾರಿ ಆಗಿ, ಅವಂತ್ರದ ಮುಖವಾಗಿ ಪರಿಚಯಿಸುವುದಕ್ಕೆ ಸಂಸ್ಥೆಯು ಹೆಮ್ಮೆ ಪಡುತ್ತದೆ ಹಾಗೂ ಈ ಅಭಿಯಾನಕ್ಕೆ ಅವರನ್ನು ಸ್ವಾಗತಿಸುತ್ತದೆ. ಅವರು ತಮ್ಮ ವಿಶ್ವಾಸದ ಮೂಲಕ, ಪರಂಪರೆ ಆಳವಾದ ಬೇರುಗಳ ಜೊತೆಗೆ ಗುರುತಿಸಿಕೊಂಡು, ಹೆಮ್ಮೆಯನ್ನು ಪ್ರತಿನಿಧಿಸುತ್ತಾರೆ. ಈ ಎಲ್ಲ ಮೌಲ್ಯಗಳು ಹೇಳಿ ಮಾಡಿಸಿದಂತೆ ಅವಂತ್ರದ ಸಿದ್ಧಾಂತಗಳ ಜೊತೆಗೆ ಹೊಂದಿಕೊಳ್ಳುತ್ತವೆ. ಸಂಪ್ರದಾಯವನ್ನು ಆಧುನಿಕ ಸ್ಪರ್ಶದ ಜೊತೆಗೆ ಸಂಭ್ರಮಿಸಬೇಕು ಎಂಬುದು ಅವಂತ್ರದ ಸಿದ್ಧಾಂತವಾಗಿದೆ. ಭಾರತದಾದ್ಯಂತ ಬೆಳೆಯುತ್ತಾ ಇರುವ ರುಕ್ಮಿಣಿ ವಸಂತ್ ಬಗೆಗಿನ ಅಭಿಮಾನ ಹಾಗೂ ಮನೋಹರವಾದ ಸೌಂದರ್ಯ, ಇವೆಲ್ಲ ಇಂದಿನ ಮಹಿಳೆಯರಲ್ಲಿ ಹೊಸ ಶಕ್ತಿಯನ್ನು ಮತ್ತು ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ.

ಅವಂತ್ರದ ಮಾರ್ಕೆಟಿಂಗ್ ಹೆಡ್ ಮಾತನಾಡಿ, ಈ ಹಬ್ಬದ ಋತುವಿನ ಟೀವಿ ಜಾಹೀರಾತು ಸುಂದರವಾದ, ಮೃದುವಾದ ಕ್ಷಣದ ಧ್ವನಿಯ ವಿಸ್ತರಣೆ ಆಗುತ್ತದೆ ಮತ್ತು ಈ ಎಲ್ಲದರ ಮಧ್ಯೆ ನಿಮ್ಮನ್ನು ನೀವು ಗೌರವಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ ಎಂದಿದ್ದಾರೆ.

ಅವಂತ್ರದ ಜಗತ್ತಿನಲ್ಲಿ ಒಮ್ಮೆ ಸುತ್ತಾಡುವ ಮೂಲಕ ಆ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ. ಅದಕ್ಕಾಗಿ ಒಮ್ಮೆ ಕ್ಲಿಕ್ ಮಾಡಿ: https://www.instagram.com/avantraofficial/

ಪಿಜಿ ವೈದ್ಯಕೀಯ: ಆನ್ ಲೈನ್ ಅರ್ಜಿ ಸಲ್ಲಿಕೆಗೆ ಅ.17 ಕೊನೆಯ ದಿನ- KEA

Good News ; ‘RBI’ನಿಂದ ‘e₹’ ಅನಾವರಣ ; ಈಗ ಇಂಟರ್ನೆಟ್ ಅಗತ್ಯವಿಲ್ಲ, ಒಂದೇ ಕ್ಲಿಕ್’ನಲ್ಲಿ ‘ಪಾವತಿ’

Share. Facebook Twitter LinkedIn WhatsApp Email

Related Posts

ಪಶ್ಚಿಮ ಏಷ್ಯಾ ಬಿಕ್ಕಟ್ಟು: ‘ಭಾರತ ನಿರ್ಣಾಯಕ ಪಾತ್ರ ವಹಿಸಿ ಯಶಸ್ಸು ಸಾಧಿಸಲಿದೆ’ :ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ!

22/04/2026 8:21 PM1 Min Read

ಆನ್‌ಲೈನ್ ಗೇಮಿಂಗ್‌ಗೆ ಕೇಂದ್ರದ ಬ್ರೇಕ್: ಮೇ 1 ರಿಂದ ಜಾರಿಗೆ ಬರಲಿವೆ ಹೊಸ ಕಠಿಣ ನಿಯಮಗಳು; ಏನೇನು ಬದಲಾಗಲಿದೆ?

22/04/2026 8:09 PM1 Min Read

ನಿಮ್ಮ ನಿವೃತ್ತಿ ಜೀವನಕ್ಕೆ ಭದ್ರತೆ: ಅಟಲ್ ಪೆನ್ಷನ್ ಯೋಜನೆ ಮೂಲಕ ಪಡೆಯಿರಿ ₹5,000 ವರೆಗೆ ಮಾಸಿಕ ಪಿಂಚಣಿ!

22/04/2026 8:03 PM2 Mins Read
Recent News

BIG NEWS: ನಾಳೆ ಕರ್ನಾಟಕ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಶಾಲಾ ಪರೀಕ್ಷೆ, ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ಮಾಹಿತಿ

22/04/2026 8:28 PM

ಪಶ್ಚಿಮ ಏಷ್ಯಾ ಬಿಕ್ಕಟ್ಟು: ‘ಭಾರತ ನಿರ್ಣಾಯಕ ಪಾತ್ರ ವಹಿಸಿ ಯಶಸ್ಸು ಸಾಧಿಸಲಿದೆ’ :ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ!

22/04/2026 8:21 PM

ಬಿಸಿಲಿನಿಂದ ಸುರಕ್ಷಿತರಾಗಿರಲು ಈ ಕ್ರಮಗಳನ್ನು ತಪ್ಪದೆ ಅನುಸರಿಸಿ!

22/04/2026 8:16 PM

ಆನ್‌ಲೈನ್ ಗೇಮಿಂಗ್‌ಗೆ ಕೇಂದ್ರದ ಬ್ರೇಕ್: ಮೇ 1 ರಿಂದ ಜಾರಿಗೆ ಬರಲಿವೆ ಹೊಸ ಕಠಿಣ ನಿಯಮಗಳು; ಏನೇನು ಬದಲಾಗಲಿದೆ?

22/04/2026 8:09 PM
State News
KARNATAKA

BIG NEWS: ನಾಳೆ ಕರ್ನಾಟಕ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಶಾಲಾ ಪರೀಕ್ಷೆ, ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ಮಾಹಿತಿ

By kannadanewsnow0922/04/2026 8:28 PM KARNATAKA 1 Min Read

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ನೇ ಸಾಲಿನ ಎಸ್.ಎಸ್.ಎಲ್.ಸಿ (SSLC) ಪರೀಕ್ಷೆ-1ರ ಫಲಿತಾಂಶ ಪ್ರಕಟಣೆಗೆ ದಿನಾಂಕವನ್ನು…

ಬಿಸಿಲಿನಿಂದ ಸುರಕ್ಷಿತರಾಗಿರಲು ಈ ಕ್ರಮಗಳನ್ನು ತಪ್ಪದೆ ಅನುಸರಿಸಿ!

22/04/2026 8:16 PM

BREAKING: ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ, ರಿಸಲ್ಟ್ ಈ ರೀತಿ ಚೆಕ್ ಮಾಡಿ | SSLC Exam Results

22/04/2026 7:48 PM

BIG BREAKING: ನಾಳೆ ಮಧ್ಯಾಹ್ನ 12 ಗಂಟೆಗೆ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ ಘೋಷಣೆ

22/04/2026 7:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.