ವಿಜಯಪುರ: ಕಳೆದ ಕೆಲ ದಿನಗಳ ಹಿಂದಷ್ಟೇ ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಭೂಕಂಪನ ಉಂಟಾಗಿತ್ತು. ಈ ಬೆನ್ನಲ್ಲೇ ಇಂದು ಮತ್ತೆ ಭೂಮಿ ಕಂಪಿಸಿದೆ. ಹೀಗಾಗಿ ಜಿಲ್ಲೆಯ ಜನತೆ ಬೆಚ್ಚಿ ಬೀಳುವಂತೆ ಆಗಿದೆ.
ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇಂದು ಮತ್ತೆ ಭೂಕಂಪನ ಉಂಟಾಗಿದೆ. ಸಂಜೆ 4.26ರ ವೇಳೆಯಲ್ಲಿ ಭೂಮಿ ಕಂಪಿಸಿದೆ ಎಂಬುದಾಗಿ ತಿಳಿದು ಬಂದಿದೆ. ಭೂಮಿ ಕಂಪಿಸುತ್ತಿದ್ದಂತೆ ಭಯದಿಂದ ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ.
BIGG NEWS: ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗ್ತೇನೆ ಅನ್ನೋದು ಭಂಡತನ- ಬಿ.ವೈ ವಿಜಯೇಂದ್ರ ವಾಗ್ದಾಳಿ
ಅಂದಹಾಗೇ ಕಳೆದ ಕೆಲ ದಿನಗಳ ಹಿಂದಷ್ಟೇ ವಿಜಯಪುರ ಜಿಲ್ಲೆಯ ಬಬಲೇಶ್ವರ, ಬಸವನಬಾಗೇವಾಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭೂಮಿ ಕಂಪಿಸಿತ್ತು. ಭಯದಿಂದ ಮನೆಯ ಹೊರಗೆ ಓಡಿ ಜನರು ಬಂದಿದ್ದರು. ಅಂದಿನಿಂದಲೂ ಆತಂಕದಲ್ಲಿಯೇ ಜೀವನ ನಡೆಸುವಂತಾಗಿತ್ತು. ಇಂದು ಮತ್ತೆ ಭೂಮಿ ಕಂಪಿಸಿದ್ದರಿಂದಾಗಿ ಜನತೆ ಬೆಚ್ಚಿ ಬೀಳುವಂತೆ ಆಗಿದೆ.