ಕೊಡಗು: ಜಿಲ್ಲೆಯಲ್ಲಿ ಮತ್ತೆ ಇಂದು ಭೂಮಿ ಕಂಪಿಸಿದೆ. ಜಿಲ್ಲೆಯ ಚೆಂಬು ಗ್ರಾಮದಲ್ಲಿ ಮತ್ತೆ ಭೂ ಕಂಪನದ ಅನುಭವ ಉಂಟಾಗಿದ್ದು, ಆತಂಕದಲ್ಲಿ ಜನತೆ ಇದ್ದಾರೆ. ಈ ಹಿಂದೆಯೂ ಹಲವು ಬಾರಿ ಭೂ ಕಂಪನದ ಅನುಭವ ಉಂಟಾಗಿತ್ತು.
ಕೊಡಗು ಜಿಲ್ಲೆಯ ಚೆಂಬು ಗ್ರಾಮದಲ್ಲಿ ಇಂದು ಮಧ್ಯಾಹ್ನ 1.24ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದೆ. ಈ ಮೂಲಕ ಕಳೆದ ಒಂದು ವಾರದಲ್ಲಿಯೇ ಆರು ಭಾರಿ ಭೂಮಿ ಕಂಪಿಸಿದ ಅನುಭವ ಚೆಂಬು ಗ್ರಾಮದ ಜನರಿಗೆ ಉಂಟಾಗಿದೆ.
ಪದೇ ಪದೇ ಭೂಮಿ ಕಂಪಿಸುತ್ತಿರೋ ಕಾರಣದಿಂದಾಗಿ, ಚೆಂಬು ಗ್ರಾಮದ ಜನತೆ ಆತಂಕದಲ್ಲಿದ್ದಾರೆ. ಜೊತೆಗೆ ಭೂ ಕುಸಿತದ ಭಯದಲ್ಲಿ ಬದುಕುವಂತೆ ಆಗಿದೆ.