ಬೆಂಗಳೂರು: 2022-23ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡೆತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢ ಶಾಲಾ ಶಿಕ್ಷಕರು, ತತ್ಸಮಾನ ವೃಂದದ ಹೆಚ್ಚುವರಿ ಶಿಕ್ಷಕರನ್ನು ಆಧ್ಯತೆ, ವಿನಾಯಿತಿಗೆ ದೈಹಿಕ ಅಂಗವಿಕಲ ಪ್ರಕರಣವನ್ನು ಪರಿಗಣಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.
ಕೊನೆಗೂ ಯಡಿಯೂರಪ್ಪ ಮನವೊಲಿಕೆಯಲ್ಲಿ ಬಿಜೆಪಿ ನಾಯಕರು ಸಕ್ಸಸ್: ನಾಳೆ ಕೊಪ್ಪಳದ ಕಾರ್ಯಕ್ರಮದಲ್ಲಿ ಭಾಗಿ
ಈ ಸಂಬಂಧ ಮಾಹಿತಿ ಬಿಡುಗಡೆ ಮಾಡಿರುವಂತ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, 2022-23ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡೆತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢ ಶಾಲಾ ಶಿಕ್ಷಕರು, ತತ್ಸಮಾನ ವೃಂದದ ಹೆಚ್ಚುವರಿ ಶಿಕ್ಷಕರನ್ನು ಆಧ್ಯತೆಯ ವಿನಾಯಿತಿಗೆ ಪರಿಗಣಿಸಲಾಗಿದೆ ಎಂದಿದ್ದಾರೆ.
‘ಬೆಳಗಾವಿ ಅಧಿವೇಶನ’ದಲ್ಲಿ ಭಾಗಿಯಾಗುವ ‘ಸರ್ಕಾರಿ ನೌಕರ’ರ ಗಮನಕ್ಕೆ: ‘ಐಡಿ ಕಾರ್ಡ್’ ಧರಿಸುವುದು ಕಡ್ಡಾಯ
ದೈಹಿಕ ಅಂಗವಿಕಲ ಪ್ರಕರಣದಲ್ಲಿ ಅರ್ಹ ಶಿಕ್ಷಕರಿಗೆ ಹೆಚ್ಚುವರಿಯಿಂದ ವಿನಾಯ್ತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ದೈಹಿಕ ಅಂಗವಿಕಲ ಶಿಕ್ಷಕರಿಗೆ ಆದ್ಯತೆ, ವಿನಾಯಿತಿ ನೀಡಲು ಜಿಲ್ಲಾ ಮಟ್ಟದ ತ್ರಿಸದಸ್ಯ ವೈದ್ಯಕೀಯ ಮಂಡಳಿಯು ನೀಡಿರುವ ಪ್ರಮಾಣ ಪತ್ರ ಅಥವಾ ಕೇಂದ್ರ ಸರ್ಕಾರದಿಂದ ನೀಡಲಾಗಿರುವ Unique Disability ID ಪಡೆದಿರುವ ಶಿಕ್ಷಕರು, ಶಿಕ್ಷಕರ ಪತಿ-ಪತ್ನಿ ಮತ್ತು ಮಕ್ಕಳು ಪಡೆದಿರುವ ಅಂಗವಿಕಲ ಗುರುತಿನ ಚೀಟಿಯನ್ನು ಪರಿಶೀಲಿಸಿದ ನಂತ್ರ ಆಧ್ಯತೆ, ವಿನಾಯಿತಿಗೆ ಪರಿಗಣಿಸುವಂತೆ ತಿಳಿಸಿದ್ದಾರೆ.