ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬೀದಿನಾಯಿ ದಾಳಿ ನಡೆಸಿದ ಘಟನೆ ನಡೆದಿದೆ. 17 ಕ್ಕೂ ಅಧಿಕ ವಿದ್ಯಾರ್ಥಿಗಳ ಮೇಎ ದಾಳಿ ನಡೆಸಿದ್ದು ಆ ಪೈಕಿ ಇಬ್ಬರಿಗೆ ಗಂಭೀರ ಗಾಯವಾಗಿದೆ.
BIGG NEWS: ಬೆಂಗಳೂರಿನಲ್ಲಿ ಕೊರೊನಾ ಫುಲ್ ಕಟ್ಟೆಚ್ಚರ…!; ಕೋವಿಡ್ ಜಾಗೃತಿಗೆ ಮುಂದಾದ ಮಾರ್ಷಲ್ ಗಳು
ಸರ್ಕಾರಿ ಸ್ವತಂತ್ರ ಪಿಯು ಹಾಗೂ ಎಸ್ಎಂಎಸ್ ಪಿಯು ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಇದು ದಾಳಿ ಮಾಡಿ ಗಾಯಗೊಳಿಸಿದೆ. 17ಕ್ಕೂ ಹೆಚ್ಚು ಜನರಿಗೆ ಹುಚ್ಚುನಾಯಿ ಕಚ್ಚಿ ಗಾಯಗೊಳಿಸಿದೆ.ಗಾಯಾಳು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಡಾವಣೆಯ ದಶರಥ ದೇವಾಲಯ ಆವರಣದಲ್ಲಿದ್ದ ಹುಚ್ಚುನಾಯಿ ಏಕಾಏಕಿ ಬಂದು ದಾರಿಯಲ್ಲಿ ಹೋಗುತ್ತಿದ್ದ ನನ್ನ ಎಡ ಮೊಣಕೈಗೆ ಕಚ್ಚಿತು. ಬಳಿಕ ತೊಡೆ, ಕಾಲುಗಳನ್ನು ಗಾಯಗೊಳಿಸಿತು. ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದೆ ಎಂದು ದಾಳಿಗೊಳಗಾದ ಸುಧೀಂದ್ರ ಅವರು ತಿಳಿಸಿದರು.