ಬೆಂಗಳೂರು : 2022ರಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಹಿನ್ನೆಲೆ ಬೆಂಗಳೂರಿನಲ್ಲಿ 1 ಕೋಟಿ 4 ಲಕ್ಷ ಪ್ರಕರಣ ದಾಖಲಾಗಿದೆ ಎಂದು ಬೆಂಗಳೂರು ಸಂಚಾರಿ ವಿಶೇಷ ಕಮಿಷನರ್ ಡಾ.ಸಲೀಂ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು 1ಕೋಟಿ 4 ಲಕ್ಷ ಪ್ರಕರಣ ದಾಖಲಾಗಿದ್ದು, ಬರೋಬ್ಬರಿ 179 ಕೋಟಿ ರೂ ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 2022ರಲ್ಲಿ 748 ಮಾರಣಾಂತಿಕ ಪ್ರಕರಣಗಳು ಸಂಭವಿಸಿದ್ದು, ಒಟ್ಟು 777 ಜನ ರಸ್ತೆ ಅಪಘಾತಗಳಿಂದ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ನಮ್ಮ ಉದ್ದೇಶ ಬರೀ ಪ್ರಕರಣ ದಾಖಲಿಸುವುದು ಅಲ್ಲ, ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವುದು ಅಷ್ಟೆ, ಟ್ರಾಫಿಕ್ ಹೆಚ್ಚಿರುವ ಪ್ರದೇಶಗಳಲ್ಲಿ ಜನರು ಹೆಲ್ಮೆಟ್ ಧರಿಸುವುದಿಲ್ಲ, ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರುತ್ತಾರೆ ಎಂದು ಹೇಳಿದರು.
2022 ರಲ್ಲಿ ಕಳೆದ ವರ್ಷ ಬರೋಬ್ಬರಿ 1 ಕೋಟಿ 4 ಲಕ್ಷ ಪ್ರಕರಣ ದಾಖಲಾಗಿ, ವಾಹನ ಸವಾರರಿಂದ 179 ಕೋಟಿ ರೂ ದಂಡ ವಸೂಲಿ ಮಾಡಲಾಗಿದೆ.
ಸಿದ್ದರಾಮಯ್ಯ ಬಳಸಿದ ಭಾಷೆ, ಅವರ ಘನತೆಗೆ ತಕ್ಕುದಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರ
BIG NEWS: ನಾಳೆ ಬೀದರ್ ಜಿಲ್ಲೆಯಿಂದ 2ನೇ ಹಂತದ ಪಂಚರತ್ನ ರಥಯಾತ್ರೆ ಆರಂಭ