ಬೆಂಗಳೂರು: ನಗರದಲ್ಲಿ ಪ್ರಯಾಣಿಕರ ಸಮೇತ ಬಸ್ ಒಂದನ್ನು ಟ್ರಾಫಿಕ್ ಪೊಲೀಸರು ಸೀಜ್ ಮಾಡಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಬಳಿಯಲ್ಲಿ ನಿನ್ನೆ ಈ ಘಟನೆ ನಡೆದಿದೆ.
ಬೆಂಗಳೂರಿನ ಹೆಬ್ಬಾಳದ ಬಳಿಯಲ್ಲಿ ಹೊಸಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸನ್ನು ಚಾಲಕ ಎಸ್ಟೀಮ್ ಮಾಲ್ ಬಳಿಯಲ್ಲಿ ನಿಲ್ಲಿಸಿದ್ದನು. ಇಂತಹ ಬಸ್ಸನ್ನು ಸಂಜಯ ನಗರ ಸಂಚಾರ ಠಾಣೆಯ ಪೊಲೀಸರು ಸೀಜ್ ಮಾಡಿದ್ದರು.
ರಸ್ತೆಯಲ್ಲಿ ಸ್ಟಾಪ್ ನೀಡದ್ದಕ್ಕೆ ಪ್ರಯಾಣಿಕರ ಸಮೇತ ಕೆ ಎಸ್ ಆರ್ ಟಿ ಸಿ ಬಸ್ಸನ್ನು ಸಂಚಾರ ಪೊಲೀಸರು ಸೀಜ್ ಮಾಡಿದ್ದಾರೆ. ಕೆ ಎಸ್ ಆರ್ ಟಿ ಸಿ ಬಸ್ಸನ್ನು ಸ್ಟೇಷನ್ನಿಗೆ ಸಂಚಾರ ಠಾಣೆಯ ಕಾನ್ಸ್ ಟೇಬಲ್ ಕೊಂಡೊಯ್ದಿದ್ದಾರೆ. ಪ್ರಯಾಣಿಕರು ತುರ್ತಾಗಿ ಹೋಗಬೇಕು ಎಂಬುದಾಗಿ ಮನವಿ ಮಾಡಿದರೂ, ಅದಕ್ಕೆ ಬಗ್ಗದೇ ಬಸ್ ಜಪ್ತಿಯನ್ನು ಪೊಲೀಸರು ಮಾಡಿದ್ದಾರೆ.
BREAKING: ಕಾಳಿಂಗ ಸರ್ಪಕ್ಕೆ ಪೋಟೋ ಶೂಟ್ ಕಾಟ ಕೊಟ್ಟವರಿಗೆ ಶಾಕ್: ತನಿಖೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶ
BREAKING: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗೆ ಆಯುಕ್ತರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ