ಬೆಂಗಳೂರು: ರಂಜಾನ್ ಉಪವಾಸದ ಪವಿತ್ರ ತಿಂಗಳ ಅಂತ್ಯವನ್ನು ಸೂಚಿಸುವ ‘ಈದ್-ಉಲ್-ಫಿತ್ರ್’ ಹಬ್ಬದ ಸಾಮೂಹಿಕ ಪ್ರಾರ್ಥನೆಯು ಮಾರ್ಚ್ 21ರ ಶುಕ್ರವಾರದಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿಯ ಈದ್ಗಾ ಮೈದಾನ ಹಾಗೂ ಪ್ರಮುಖ ಮಸೀದಿಗಳ ಸುತ್ತಮುತ್ತ ಭಾರಿ ಜನಸಾಗರ ಸೇರುವ ನಿರೀಕ್ಷೆಯಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರಿ ಪೊಲೀಸರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹಾಗೂ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಿದ್ದಾರೆ.
ಬೆಳಿಗ್ಗೆ 8 ಗಂಟೆಯಿಂದ ಪ್ರಾರ್ಥನೆ ಮುಗಿಯುವವರೆಗೆ ಈ ಕೆಳಗಿನ ಬದಲಾವಣೆಗಳು ಜಾರಿಯಲ್ಲಿರುತ್ತವೆ:
1. ಮೈಸೂರು ರಸ್ತೆ ಹಾಗೂ ಚಾಮರಾಜಪೇಟೆ ಸುತ್ತಮುತ್ತ
ಮೈಸೂರು ರಸ್ತೆಯ ಬಿಬಿ ಜಂಕ್ಷನ್, ಬಿಬಿಎಂಪಿ ಮೈದಾನ ಮತ್ತು ಚಾಮರಾಜಪೇಟೆ ಈದ್ಗಾ ಮೈದಾನಗಳಲ್ಲಿ ಸುಮಾರು 20,000ಕ್ಕೂ ಹೆಚ್ಚು ಜನರು ಸೇರುವ ಸಾಧ್ಯತೆಯಿದೆ.
-
ನಿರ್ಬಂಧ: ಟೌನ್ ಹಾಲ್‌ನಿಂದ ಮೈಸೂರು ರಸ್ತೆ ಕಡೆಗೆ ಬಿಜಿಎಸ್ ಫ್ಲೈಓವರ್ ಮತ್ತು ಬಿಬಿ ಜಂಕ್ಷನ್ ಮೂಲಕ ಟೋಲ್‌ಗೇಟ್ ವರೆಗಿನ ಸಂಚಾರವನ್ನು ನಿರ್ಬಂಧಿಸಲಾಗಿದೆ.
-
ಪರ್ಯಾಯ ಮಾರ್ಗ: * ಮೈಸೂರು ರಸ್ತೆಯಿಂದ ಟೌನ್ ಹಾಲ್‌ಗೆ ಬರುವವರು: ಕೆಂಗೇರಿ ಜಂಕ್ಷನ್ → ಕಾರ್ಡ್ ರಸ್ತೆ → ಮಾಗಡಿ ರಸ್ತೆ (ಟೋಲ್ ಗೇಟ್) → ಹುಣಸೇಮರ ಜಂಕ್ಷನ್ → ಶಿರಸಿ ವೃತ್ತದ ಮೂಲಕ ಸಾಗಬಹುದು.
-
ಭಾರೀ ವಾಹನಗಳು: ಬಿಜಿಎಸ್ ಫ್ಲೈಓವರ್ ಕೆಳಗಿನ ಸರ್ವಿಸ್ ರಸ್ತೆ ಬಳಸಿ ವೆಟರ್ನರಿ ಜಂಕ್ಷನ್ ಮೂಲಕ ಗೂಡ್ಸ್ ಶೆಡ್ ರಸ್ತೆ ತಲುಪಬಹುದು.
-
ಬಸವನಗುಡಿ/ಚಾಮರಾಜಪೇಟೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವವರು: 5ನೇ ಅಡ್ಡರಸ್ತೆ → ಪಶುವೈದ್ಯಕೀಯ ಜಂಕ್ಷನ್ → ಗೂಡ್ಸ್ ಶೆಡ್ ರಸ್ತೆ ಮಾರ್ಗ ಬಳಸಬೇಕು.
-
2. ನಾಗವಾರ ಮತ್ತು ಪಾಟರಿ ವೃತ್ತ (ಬೆಳಿಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ)
-
ನಿರ್ಬಂಧ: ನಾಗವಾರದಿಂದ ಪಾಟರಿ ವೃತ್ತದವರೆಗೆ ಸಂಚಾರ ನಿರ್ಬಂಧಿಸಲಾಗಿದೆ. ಈ ಮಾರ್ಗದಲ್ಲಿ ಪಾರ್ಕಿಂಗ್ ಸಂಪೂರ್ಣ ನಿಷೇಧಿಸಲಾಗಿದೆ.
-
ಪರ್ಯಾಯ ಮಾರ್ಗ: * ಶಿವಾಜಿನಗರ ಕಡೆಗೆ ಹೋಗುವವರು: ಹೆಣ್ಣೂರು ರಸ್ತೆ → ಎಚ್‌ಬಿಆರ್ 80 ಅಡಿ ರಸ್ತೆ → ಲಿಂಗರಾಜಪುರಂ ಮೇಲ್ಸೇತುವೆ → ಪುಲಕೇಶಿನಗರದ ಮೂಲಕ ಸಂಚರಿಸಬಹುದು.
-
ಆರ್.ಟಿ.ನಗರದಿಂದ ಕಾವಲ್ ಬೈರಸಂದ್ರ ಕಡೆಗೆ ಹೋಗುವವರು: ವೀರಣ್ಣ ಪಾಳ್ಯ ಮತ್ತು ನಾಗವಾರ ಮಾರ್ಗ ಬಳಸಲು ಸೂಚಿಸಲಾಗಿದೆ.
-
3. ಮಿಲ್ಲರ್ಸ್ ರಸ್ತೆ ಮತ್ತು ಸೇಂಟ್ ಜಾನ್ಸ್ ಚರ್ಚ್ ರಸ್ತೆ (ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ)
-
ನಿರ್ಬಂಧ: ಹಳೆಯ ಉದಯ ಟಿವಿ ಜಂಕ್ಷನ್‌ನಿಂದ ಮಿಲ್ಲರ್ಸ್ ರಸ್ತೆ ವರೆಗೆ ಸಂಚಾರ ನಿರ್ಬಂಧವಿದ್ದು, ನೋ-ಪಾರ್ಕಿಂಗ್ ವಲಯ ಘೋಷಿಸಲಾಗಿದೆ.
-
ಪರ್ಯಾಯ ಮಾರ್ಗ: ವಾಹನ ಸವಾರರು ಬಂಬೂ ಬಜಾರ್ → ನೇತಾಜಿ ರಸ್ತೆ → ವಾಯುವಿಹಾರ ರಸ್ತೆ ಅಥವಾ ಕಂಟೋನ್ಮೆಂಟ್ → ಕ್ವೀನ್ಸ್ ರಸ್ತೆ → ಜಯಮಹಲ್ ರಸ್ತೆ ಮಾರ್ಗವಾಗಿ ಸಂಚರಿಸಬಹುದು.
ಸಾರ್ವಜನಿಕರಿಗೆ ಮನವಿ: ಪ್ರಾರ್ಥನಾ ಸಮಯದ ವಿಳಂಬ ಮತ್ತು ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸಲು ವಾಹನ ಸವಾರರು ಈ ಪರ್ಯಾಯ ಮಾರ್ಗಗಳನ್ನು ಮೊದಲೇ ಗಮನಿಸಿ ಪ್ರಯಾಣ ಯೋಜಿಸಬೇಕು. ಸಂಚಾರ ಪೊಲೀಸರೊಂದಿಗೆ ಸಹಕರಿಸುವಂತೆ ಅಧಿಕಾರಿಗಳು ಕೋರಿದ್ದಾರೆ.
ಸ್ಟಾಕ್ ಟ್ರೇಡಿಂಗ್ ಹುಚ್ಚು: ಪತ್ನಿ ಹೆಸರಲ್ಲಿ ₹93 ಲಕ್ಷ ಸಾಲ ಮಾಡಿ ವಂಚಿಸಿದ ಪತಿ!
BREAKING : ಉಪಚುನಾವಣೆ ಕಾವು : ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ತಾಯಿಯೊಂದಿಗೆ ಬಂದು ನಾಮಪತ್ರ ಸಲ್ಲಿಸಿದ ಸಮರ್ಥ








