Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೋಷಕರೇ ಗಮನಿಸಿ : ರಾಜ್ಯದ ಶಾಲೆಗಳಲ್ಲಿ ನಿಮ್ಮ ಮಕ್ಕಳನ್ನು 1ನೇ ತರಗತಿಗೆ ಸೇರಿಸಲು ಈ ದಾಖಲೆಗಳು ಕಡ್ಡಾಯ.!

ಡಿಸಿಎಂ ಜೊತೆಗೆ ಪ್ರಮುಖ ಖಾತೆ ಕೊಡಿ, ಇಲ್ಲವಾದರೆ ಮಂತ್ರಿ ಸ್ಥಾನವೇ ಬೇಡ ಶಾಸಕನಾಗಿ ಇರುತ್ತೇನೆ : ಜಿ ಪರಮೇಶ್ವರ ಸಮಾಧಾನ!

BREAKING : ಬೆಂಗಳೂರಲ್ಲಿ ಮಟನ್ ಹೆಸರಲ್ಲಿ ಗೋಮಾಂಸ ನೀಡುತ್ತಿದ್ದ ಇಬ್ಬರು ರೆಸ್ಟೋರೆಂಟ್ ಮಾಲೀಕರು ಅರೆಸ್ಟ್.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕರ್ನಾಟಕ `SSLC ತೃತೀಯ ಭಾಷೆ ಪರೀಕ್ಷೆಯಲ್ಲಿ ಗ್ರೇಡಿಂಗ್ ವ್ಯವಸ್ಥೆ ಜಾರಿ : ಒಟ್ಟು ಅಂಕ 525ಕ್ಕೆ ಇಳಿಕೆ.!
KARNATAKA

BIG NEWS : ಕರ್ನಾಟಕ `SSLC ತೃತೀಯ ಭಾಷೆ ಪರೀಕ್ಷೆಯಲ್ಲಿ ಗ್ರೇಡಿಂಗ್ ವ್ಯವಸ್ಥೆ ಜಾರಿ : ಒಟ್ಟು ಅಂಕ 525ಕ್ಕೆ ಇಳಿಕೆ.!

By kannadanewsnow57

ಬೆಂಗಳೂರು: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಎಸ್ಎಸ್ಎಲ್ಸಿ ಪರೀಕ್ಷೆಯ ಮೌಲ್ಯಮಾಪನ ಕ್ರಮದಲ್ಲಿ ಮಹತ್ವದ ಬದಲಾವಣೆ ತಂದಿದೆ. ಇನ್ನು ಮುಂದೆ ತೃತೀಯ ಭಾಷಾ ವಿಷಯಕ್ಕೆ ಅಂಕಗಳ ಬದಲಾಗಿ ಗ್ರೇಡ್ ನೀಡಲು ನಿರ್ಧರಿಸಲಾಗಿದ್ದು, ಈ ಕುರಿತು ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ.

ಈ ಹೊಸ ನಿಯಮದ ಜಾರಿಯಿಂದಾಗಿ ಎಸ್ಎಸ್ಎಲ್ಸಿ ಪರೀಕ್ಷೆಯ ಒಟ್ಟು ಅಂಕಗಳು 625ರಿಂದ 525ಕ್ಕೆ ಇಳಿಕೆಯಾಗಲಿವೆ. ತೃತೀಯ ಭಾಷೆ ಮತ್ತು ಎನ್ಎಸ್ಕ್ಯೂಎಫ್ (NSQF) ವಿಷಯಗಳಿಗೆ ಅಂಕಗಳ ಬದಲು ವಿದ್ಯಾರ್ಥಿಗಳ ಸಾಧನೆಯನ್ನು ಗ್ರೇಡ್ಗಳ ಮೂಲಕ ಅಳೆಯಲಾಗುತ್ತದೆ.

ಗ್ರೇಡ್ ಹಂಚಿಕೆ ವಿವರ:

A ಗ್ರೇಡ್: 80 ರಿಂದ 100 ಅಂಕ ಗಳಿಸಿದವರಿಗೆ.

B ಗ್ರೇಡ್: 50 ರಿಂದ 79 ಅಂಕ ಗಳಿಸಿದವರಿಗೆ.

C ಗ್ರೇಡ್: 49 ರವರೆಗೆ ಅಂಕ ಪಡೆದವರಿಗೆ.

ವಿಶೇಷವೆಂದರೆ, ಈ ಗ್ರೇಡ್ಗಳು ವಿದ್ಯಾರ್ಥಿಯ ‘ಪಾಸು’ ಅಥವಾ ‘ಫೇಲ್’ ಎಂಬ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಸಾರ್ವಜನಿಕರ ಸಲಹೆಗೆ ಮುಕ್ತ ಅವಕಾಶ
ಈ ಕರಡು ಅಧಿಸೂಚನೆಯ ಕುರಿತು ಸಾರ್ವಜನಿಕರು ತಮ್ಮ ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಲು ಇಲಾಖೆಯು 7 ದಿನಗಳ ಕಾಲಾವಕಾಶ ನೀಡಿದೆ. ಆಸಕ್ತರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ತಮ್ಮ ಅಭಿಪ್ರಾಯಗಳನ್ನು ತಲುಪಿಸಬಹುದಾಗಿದೆ.

ಪಿಐಎಲ್ ವಜಾ: ಅರ್ಜಿದಾರರಿಗೆ ದಂಡ
ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಎಚ್.ಎನ್. ಚಂದನಾ ಮತ್ತು ಎಸ್. ವೆಂಕಟೇಶ್ ಎಂಬುವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಪರೀಕ್ಷೆಯ ಕೊನೆಯ ಹಂತದಲ್ಲಿ ಇಂತಹ ನಿರ್ಧಾರ ಕೈಗೊಳ್ಳುವುದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅವರು ವಾದಿಸಿದ್ದರು.

ಆದರೆ, ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ಅಧಿಕೃತ ಆದೇಶದ ವಿವರಗಳಿಲ್ಲದೆ ಕೇವಲ ಪತ್ರಿಕಾ ವರದಿಗಳನ್ನು ಆಧರಿಸಿ ಅರ್ಜಿ ಸಲ್ಲಿಸಿರುವುದನ್ನು ಗಂಭೀರವಾಗಿ ಪರಿಗಣಿಸಿತು. ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು, ಅರ್ಜಿದಾರರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ ಶಾಕ್ ನೀಡಿದೆ.

ಏಪ್ರಿಲ್ 24ಕ್ಕೆ ಫಲಿತಾಂಶ?
ಈಗಾಗಲೇ ಉತ್ತರಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಅಂದುಕೊಂಡಂತೆ ನಡೆದರೆ ಏಪ್ರಿಲ್ 24ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ.

BIG NEWS: `SSLC' third language in the state will no longer be graded: Total marks reduced to 525!
Share. Facebook Twitter LinkedIn WhatsApp Email

Related Posts

ಪೋಷಕರೇ ಗಮನಿಸಿ : ರಾಜ್ಯದ ಶಾಲೆಗಳಲ್ಲಿ ನಿಮ್ಮ ಮಕ್ಕಳನ್ನು 1ನೇ ತರಗತಿಗೆ ಸೇರಿಸಲು ಈ ದಾಖಲೆಗಳು ಕಡ್ಡಾಯ.!

1 Min Read

ಡಿಸಿಎಂ ಜೊತೆಗೆ ಪ್ರಮುಖ ಖಾತೆ ಕೊಡಿ, ಇಲ್ಲವಾದರೆ ಮಂತ್ರಿ ಸ್ಥಾನವೇ ಬೇಡ ಶಾಸಕನಾಗಿ ಇರುತ್ತೇನೆ : ಜಿ ಪರಮೇಶ್ವರ ಸಮಾಧಾನ!

2 Mins Read

BREAKING : ಬೆಂಗಳೂರಲ್ಲಿ ಮಟನ್ ಹೆಸರಲ್ಲಿ ಗೋಮಾಂಸ ನೀಡುತ್ತಿದ್ದ ಇಬ್ಬರು ರೆಸ್ಟೋರೆಂಟ್ ಮಾಲೀಕರು ಅರೆಸ್ಟ್.!

1 Min Read
Recent News

ಪೋಷಕರೇ ಗಮನಿಸಿ : ರಾಜ್ಯದ ಶಾಲೆಗಳಲ್ಲಿ ನಿಮ್ಮ ಮಕ್ಕಳನ್ನು 1ನೇ ತರಗತಿಗೆ ಸೇರಿಸಲು ಈ ದಾಖಲೆಗಳು ಕಡ್ಡಾಯ.!

ಡಿಸಿಎಂ ಜೊತೆಗೆ ಪ್ರಮುಖ ಖಾತೆ ಕೊಡಿ, ಇಲ್ಲವಾದರೆ ಮಂತ್ರಿ ಸ್ಥಾನವೇ ಬೇಡ ಶಾಸಕನಾಗಿ ಇರುತ್ತೇನೆ : ಜಿ ಪರಮೇಶ್ವರ ಸಮಾಧಾನ!

BREAKING : ಬೆಂಗಳೂರಲ್ಲಿ ಮಟನ್ ಹೆಸರಲ್ಲಿ ಗೋಮಾಂಸ ನೀಡುತ್ತಿದ್ದ ಇಬ್ಬರು ರೆಸ್ಟೋರೆಂಟ್ ಮಾಲೀಕರು ಅರೆಸ್ಟ್.!

BIG NEWS : ಸಚಿವ ಸ್ಥಾನಕ್ಕೆ ಪರಿಗಣಿಸಲು ಹೈಕಮಾಂಡ್ ಗೆ ತಮ್ಮವರ ಪಟ್ಟಿ ಶಿಫಾರಸು ಮಾಡಿದ ಸಿದ್ದರಾಮಯ್ಯ!

State News
KARNATAKA

ಪೋಷಕರೇ ಗಮನಿಸಿ : ರಾಜ್ಯದ ಶಾಲೆಗಳಲ್ಲಿ ನಿಮ್ಮ ಮಕ್ಕಳನ್ನು 1ನೇ ತರಗತಿಗೆ ಸೇರಿಸಲು ಈ ದಾಖಲೆಗಳು ಕಡ್ಡಾಯ.!

By kannadanewsnow57 KARNATAKA 1 Min Read

ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದು, ರಾಜ್ಯದ ಸರ್ಕಾರಿ ಹಾಗೂ ಇತರೆ ಶಾಲೆಗಳಲ್ಲಿ 1ನೇ ತರಗತಿಯ ದಾಖಲಾತಿ ಪ್ರಕ್ರಿಯೆ…

ಡಿಸಿಎಂ ಜೊತೆಗೆ ಪ್ರಮುಖ ಖಾತೆ ಕೊಡಿ, ಇಲ್ಲವಾದರೆ ಮಂತ್ರಿ ಸ್ಥಾನವೇ ಬೇಡ ಶಾಸಕನಾಗಿ ಇರುತ್ತೇನೆ : ಜಿ ಪರಮೇಶ್ವರ ಸಮಾಧಾನ!

BREAKING : ಬೆಂಗಳೂರಲ್ಲಿ ಮಟನ್ ಹೆಸರಲ್ಲಿ ಗೋಮಾಂಸ ನೀಡುತ್ತಿದ್ದ ಇಬ್ಬರು ರೆಸ್ಟೋರೆಂಟ್ ಮಾಲೀಕರು ಅರೆಸ್ಟ್.!

BIG NEWS : ಸಚಿವ ಸ್ಥಾನಕ್ಕೆ ಪರಿಗಣಿಸಲು ಹೈಕಮಾಂಡ್ ಗೆ ತಮ್ಮವರ ಪಟ್ಟಿ ಶಿಫಾರಸು ಮಾಡಿದ ಸಿದ್ದರಾಮಯ್ಯ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.