ಕೋಲಾರ: ಇಂದಿನಿಂದ ಜೆಡಿಎಸ್ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ( JDS Pancharatna Rathayatra Program ) ಆರಂಭಗೊಳ್ಳಬೇಕಿತ್ತು. ಅದಕ್ಕಾಗಿ ಎಲ್ಲಾ ಸಿದ್ಧತೆಯನ್ನು ಕೋಲಾರದ ಕುರುಡುಮಲೆಯ ಬಳಿಯಲ್ಲಿ ಮಾಡಿಕೊಳ್ಳಲಾಗಿತ್ತು. ಆದ್ರೇ ನಿರಂತರ ಮಳೆಯ ಕಾರಣದಿಂದಾಗಿ ಜೆಡಿಎಸ್ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ಐದು ದಿನ ಮುಂದೂಡಿಕೆ ಮಾಡಲಾಗಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಬೈಪಾಸ್ ಬಳಿಯಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆಯನ್ನು ಇಂದು ಆಯೋಜಿಸಿ, ಆ ಮೂಲಕ ಆರಂಭಿಸೋದಕ್ಕೆ ಎಲ್ಲಾ ತಯಾರಿ ನಡೆಸಲಾಗಿತ್ತು. ಆದ್ರೇ ಮಳೆಯಿಂದಾಗಿ ಅಡ್ಡಿ ಉಂಟಾದ ಕಾರಣ ಇಂದಿನಿಂದ ಐದು ದಿನಗಳವರೆಗೆ ಮುಂದೂಡಿಕೆ ಮಾಡಲಾಗಿದೆ.
ಇನ್ನೂ ನಿರಂತರ ಮಳೆ ಬೀಳುತ್ತಿರುವ ಕಾರಣದಿಂದಾಗಿ ಜೆಡಿಎಸ್ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಐದು ದಿನ ಮುಂದೂಡಿಕೆ ಮಾಡಲಾಗಿರೋದಲ್ಲದೇ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Farmer CM HD Kumaraswamy ) ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಕೂಡ ರದ್ದುಗೊಳಿಸಲಾಗಿದೆ. ಇಂದಿನ ಜೆಡಿಎಸ್ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ರದ್ದುಗೊಂಡ ಹಿನ್ನಲೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದಂತ ಕಾರ್ಯಕರ್ತರು ವಾಪಾಸ್ ಆಗುತ್ತಿರೋದು ಕಂಡು ಬಂದಿದೆ.