2026ರ ವಿಧಾನಸಭಾ ಚುನಾವಣೆಯ ಕುರಿತು ‘ಟುಡೇಸ್ ಚಾಣಕ್ಯ’ ತನ್ನ ಎಕ್ಸಿಟ್ ಪೋಲ್ ಸಮೀಕ್ಷೆಯನ್ನು ಗುರುವಾರ ಸಂಜೆ ಬಿಡುಗಡೆ ಮಾಡಿದೆ. ಮೇ 4ರ ಫಲಿತಾಂಶಕ್ಕೂ ಮುನ್ನ ಹೊರಬಿದ್ದಿರುವ ಈ ವರದಿಯು ಮೂರು ಪ್ರಮುಖ ರಾಜ್ಯಗಳಲ್ಲಿನ ರಾಜಕೀಯ ಭವಿಷ್ಯವನ್ನು ತೆರೆದಿಟ್ಟಿದೆ.
1. ಅಸ್ಸಾಂ: ಬಿಜೆಪಿಗೆ ಭರ್ಜರಿ ಜಯದ ಮುನ್ಸೂಚನೆ
ಅಸ್ಸಾಂನ 126 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು ಈ ಬಾರಿಯೂ ದೊಡ್ಡ ಜಯ ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.
ಬಿಜೆಪಿ ಮೈತ್ರಿಕೂಟ (BJP+): 102 ಸ್ಥಾನಗಳು (±9)
ಕಾಂಗ್ರೆಸ್ ಮೈತ್ರಿಕೂಟ (Cong+): 23 ಸ್ಥಾನಗಳು (±9)
ಇತರರು: 01 ಸ್ಥಾನ
ಬಿಜೆಪಿ ಮೈತ್ರಿಕೂಟ ಶೇ. 50 ರಷ್ಟು ಮತ್ತು ಕಾಂಗ್ರೆಸ್ ಮೈತ್ರಿಕೂಟ ಶೇ. 38 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಅಸ್ಸಾಂನಲ್ಲಿ ಬಿಜೆಪಿ ಬಹುಮತದ ಗಡಿಗಿಂತ ಸಾಕಷ್ಟು ಮುಂದಿದ್ದು, ದೊಡ್ಡ ಅಂತರದಿಂದ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ವರದಿ ಹೇಳಿದೆ.
2. ಕೇರಳ: ಯುಡಿಎಫ್ ಮತ್ತು ಎಲ್‌ಡಿಎಫ್ ನಡುವೆ ನಿಕಟ ಸ್ಪರ್ಧೆ
ಕೇರಳದ 140 ಸ್ಥಾನಗಳ ವಿಧಾನಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮತ್ತು ಆಡಳಿತಾರೂಢ ಎಲ್‌ಡಿಎಫ್ (LDF) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಯುಡಿಎಫ್ (UDF): 69 ಸ್ಥಾನಗಳು (±9)
ಎಲ್‌ಡಿಎಫ್ (LDF): 64 ಸ್ಥಾನಗಳು (±9)
ಎನ್‌ಡಿಎ (NDA): 07 ಸ್ಥಾನಗಳು (±4)
ಇತರರು: 0-1 ಸ್ಥಾನ
ಯುಡಿಎಫ್ ಶೇ. 40 ಮತ್ತು ಎಲ್‌ಡಿಎಫ್ ಶೇ. 38 ರಷ್ಟು ಮತ ಪಡೆಯಲಿವೆ. ಇಲ್ಲಿ ಯುಡಿಎಫ್ ಕೇವಲ 5 ಸ್ಥಾನಗಳ ಮುನ್ನಡೆ ಹೊಂದಿದ್ದರೂ, ಕೇರಳದ ಕದನ ಅಂತಿಮ ಕ್ಷಣದವರೆಗೂ ಕುತೂಹಲಕಾರಿಯಾಗಿರಲಿದೆ.
3. ತಮಿಳುನಾಡು: ಡಿಎಂಕೆ ಮುನ್ನಡೆ, ದಳಪತಿ ವಿಜಯ್ ಅವರ ‘ಟಿವಿಕೆ’ ಭರ್ಜರಿ ಎಂಟ್ರಿ!
ತಮಿಳುನಾಡಿನ 234 ಸ್ಥಾನಗಳ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುವ ಮುನ್ಸೂಚನೆ ಸಿಕ್ಕಿದೆ.
ಡಿಎಂಕೆ ಮೈತ್ರಿಕೂಟ (DMK+): 125 ಸ್ಥಾನಗಳು (±11)
ಟಿವಿಕೆ (TVK – ವಿಜಯ್ ಪಕ್ಷ): 63 ಸ್ಥಾನಗಳು (±11)
ಎಐಎಡಿಎಂಕೆ ಮೈತ್ರಿಕೂಟ (AIADMK+): 45 ಸ್ಥಾನಗಳು (±11)
ಇತರರು: 01 ಸ್ಥಾನ
ಡಿಎಂಕೆ ಮೈತ್ರಿಕೂಟ 125 ಸ್ಥಾನಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೂ, ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಮೊದಲ ಚುನಾವಣೆಯಲ್ಲೇ 63 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಪದಾರ್ಪಣೆ ಮಾಡಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿರುವುದು ದೊಡ್ಡ ಸುದ್ದಿಯಾಗಿದೆ.








